ಉಡುಪಿ ಸಿವಿಲ್‌ ಎಂಜಿನಿಯರ್ಸ್‌ ಅಸೋಸಿಯೇಶನ್‌ : ಎಂಜಿನಿಯರ್ಸ್‌ ಡೇ ಆಚರಣೆ ಸಾಧಕರಿಗೆ ಗೌರವಾರ್ಪಣೆ

0
2

ಉಡುಪಿ ಸಿವಿಲ್‌ ಎಂಜಿನಿಯರ್ಸ್‌ ಅಸೋಸಿಯೇಶನ್‌ ವತಿಯಿಂದ ಹೊಟೇಲ್‌ ಕಿದಿಯೂರಿನ ಅನಂತ ಶಯನ ಹಾಲ್‌ನಲ್ಲಿ ಎಂಜಿನಿಯರ್ಸ್‌ ಡೇ ಆಚರಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ನೆಡೆಯಿತು. 

ಮುಖ್ಯ ಅತಿಥಿಗಳಾಗಿ ಎಂಐಟಿ ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಆ್ಯಂಡ್‌ ವೆಲ್ಫೇರ್‌ ವಿಭಾಗದ ಅಸೋಸಿಯೇಟ್‌ ಡೈರೆಕ್ಟರ್‌ ಡಾ| ರಾಘವೇಂದ್ರ ಕೆ. ಹೊಳ್ಳ    ಹಾಗೂ  ಮೆಸ್ಕಾಂ ಉಡುಪಿ ಉಪವಿಭಾಗದ ಎಇಇ ಎಸ್‌. ಗಣರಾಜ ಭಟ್‌  ರವರು ಸಾಧಕರಿಗೆ ಸಮ್ಮಾನ ನೆರವೇರಿಸಿದರು.

ಸಂಗೀತ ಕ್ಷೇತ್ರದ ವಿದುಷಿ ಸಂಗೀತಾ ಬಾಲಚಂದ್ರ ಅವರಿಗೆ ‘ಉಡುಪಿ ಕೋಗಿಲೆ’, ನೃತ್ಯ ಕಲಾವಿದೆ ವಿದುಷಿ ದೀಕ್ಷಾ ರಾಮಕೃಷ್ಣ ಅವರಿಗೆ ‘ಕೀರ್ತನಾ ಕಲಾಶ್ರೀ’ ಹಾಗೂ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ‘ಸೇವಾ ದುರಂಧರ’ ಈಶ್ವರ ಮಲ್ಪೆ ಅವರಿಗೆ ‘ಮತ್ಸ್ಯ ರಾಜ’ ಬಿರುದಿನೊಂದಿಗೆ ಸಮ್ಮಾನಿಸಲಾಯಿತು. ಪ್ರತಿಭಾನ್ವಿತ ಎಂಜಿನಿಯರಿಂಗ್ ವಿದ್ಯಾರ್ಥಿ ಗಗನ್ ರವರಿಗೆ  ವಿದ್ಯಾರ್ಥಿವೇತನ ನೀಡಿ ಸಮ್ಮಾನಿಸಲಾಯಿತು.       

ವೇದಿಕೆಯಲ್ಲಿ   ಅಸೋಸಿಯೇಶನ್‌ ಅಧ್ಯಕ್ಷ ಕೆ. ರಂಜನ್‌  ,  ಉಪಾಧ್ಯಕ್ಷ ರಾದ ಭರತ್ ಭೂಷಣ್, ಗಣೇಶ್ ಬೈಲೂರು ,   ಪ್ರಧಾನ ಕಾರ್ಯದರ್ಶಿ ಕೆ. ಹರೀಶ್‌ ಕುಮಾರ್‌ ,  ಕೋಶಾಧಿಕಾರಿ  ಗಣೇಶ್‌ ಎಸ್  ಸಾಲ್ಯಾನ್‌ ,ಜೊತೆ ಕಾರ್ಯದರ್ಶಿ  ಅನಂತೇಶ್ ಆಚಾರ್ಯ , ನಿರ್ದೇಶಕರಾದ ದಿನೇಶ್   , ಹಾಗೂ   ಸಂಘದ ನೂರಾರು  ಸದಸ್ಯರು ಉಪಸ್ಥಿತರಿದ್ದರು.