ಉಡುಪಿ ಕೋಸ್ಟಲ್ ಸ್ಟಾರ್ ಸಮ್ಮಿಲನ ಕಾರ್ಯಕ್ರಮವು ದಿನಾಂಕ 16/11/2025 ರಂದು ಉಡುಪಿ ಕಿದಿಯೂರು ಹೋಟೆಲ್ ಸಭಾಂಗಣದಲ್ಲಿ ವಿಜ್ರಂಭಣೆಯಿಂದ ನೆರವೇರಿತು. ಉಡುಪಿ ಜೆಲ್ಲೆಯ ಗಾಯಕರ ಸಮ್ಮಿಲನ ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ದೀಪಬೆಳಗಿಸಿ ಮಾತನಾಡುತ್ತಾ ಈ ಸಂಸ್ಥೆವತಿಯಿಂದ ಹಲವೂ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಸಂಸ್ಥೆ ಹಮ್ಮಿಕೊಂಡಿದ್ದು , ಸಂಗೀತ ಕಲೆ ಉಳಿವುವಲ್ಲಿ ಇವರ ಪ್ರಯತ್ನ ನಿರಂತರ ನೆಡೆಯಲಿ ಶುಭ ಹಾರೈಸಿದರು ಮುಖ್ಯ ತೀರ್ಪುಗಾರರಾಗಿ ಗಾಯಕ/ಗಾಯಕಿಯರ ಆಯ್ಕೆಯನ್ನು ಶ್ರೀಯುತ ವಿದ್ವಾನ್ ಗುರುದಾಸ್ ಶೆಣೈ , ಹಿನ್ನೆಲೆಗಾಯಕ ರವೀಂದ್ರ ಪ್ರಭು, ಹಾಗೂ ಖ್ಯಾತ ಗಾಯಕಿ ರಮ್ಯ ಸುಧೀಂದ್ರ ರವರು ನಡೆಸಿಕೊಟ್ಟರು. ಅತಿಥಿಗಳಾಗಿ ಆಗಮಿಸಿದ ಖ್ಯಾತ ಉದ್ಯಮಿಗಳಾದ ಶ್ರೀಯುತ ಶಿವಪ್ರಸಾದ್ ಶೆಟ್ಟಿ, ಶ್ರೀಯುತ ಸುನಿಲ್ ಕುಮಾರ್ ಶೆಟ್ಟಿ, ಶ್ರೀಯುತ ವಸಂತ್,ರವರು ಶುಭ ಹಾರೈಸಿದರು. ಕೋಸ್ಟಲ್ ಸ್ಟಾರ್ ಗಾಯಕರು , ಗಾಯಕಿಯರು ಉಪಸ್ಥರಿದ್ದರು

