ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಸಂದೀಪ್ ಪೂಜಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಸಂಘದ ಮನವಿ ಮೇರೆಗೆ ಸಂಘದ ಸದಸ್ಯರು ಹಾಗೂ ವಿವಿಧ ದಾನಿಗಳಿಂದ ಒಟ್ಟು 3,81650 ರೂ. ಹಣವನ್ನು ಸಂಗ್ರಹಿಸಲಾಗಿದೆ. ಇನ್ನು ಹೆಚ್ಚಿನ ಹಣ ಸಂದೀಪ್ ಪೂಜಾರಿಯ ಖಾತೆಗೆ ನೇರ ಜಮೆ ಆಗಿದೆ. ಹೀಗಾಗಿ ಸಂಘದ ಮನವಿಯಂತೆ ಸುಮಾರು 4ಲಕ್ಷ ರೂ.ವರೆಗೆ ಹಣ ಸಂಗ್ರಹವಾಗಿದೆ.
ಇದರಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಿಕಾ ಭವನ ಸಂಚಾಲಕರ ಖಾತೆಗೆ ಒಟ್ಟು 138650ರೂ. ಹಣ ಜಮೆ ಆಗಿದೆ. ಈ ಹಣದಲ್ಲಿ ಸಂದೀಪ್ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಒಟ್ಟು 5.30ಲಕ್ಷ ರೂ. ಆಸ್ಪತ್ರೆ ಬಿಲ್ ಆಗಿದೆ. ಅದರಲ್ಲಿ ಸಂದೀಪ್‌ನ ಇನ್ಸೂರೆನ್ಸ್‌ನಿಂದ 4ಲಕ್ಷ ರೂ. ಪಾವತಿ ಯಾಗಿದೆ. ಉಳಿದ ಬಿಲ್‌ನ್ನು ಸಂಘದಿಂದ ಪಾವತಿಸಲು ತೀರ್ಮಾನಿಸಲಾಗಿತ್ತು. ಇದರಲ್ಲಿ 30ಸಾವಿರ ರೂ. ರಿಯಾಯಿತಿಯೊಂದಿಗೆ ಸಂಘದಿಂದ 1ಲಕ್ಷ ರೂ. ಹಣ ಪಾವತಿಸಲಾಗಿದೆ.
ಉಳಿದ ಸಂಗ್ರಹವಾದ ಮೊತ್ತದಲ್ಲಿ ಅಂದರೆ 38,650ರೂ.ನಲ್ಲಿ ಆ್ಯಂಬುಲೆನ್ಸ್, ಪೊಲೀಸ್ ಖರ್ಚು ಸೇರಿದಂತೆ ಇತರ 15600ರೂ. ಆಗಿದೆ. ಅಂತಿಮವಾಗಿ ಉಳಿದ 23050ರೂ. ನಗದು ಹಣವನ್ನು ಸಂದೀಪ್ ಕುಟಂಬಕ್ಕೆ ಹಸ್ತಾಂತರಿಸಲಾಯಿತು. ಇದರೊಂದಿಗೆ ನಮ್ಮ ಸಂಘ, ತಾಲೂಕು ಸಂಘಗಳು ಸೇರಿದಂತೆ ಇತರ ಚೆಕ್ ಹಾಗೂ ನಗದು ರೂಪದಲ್ಲಿ ಬಂದ ಹಣವನ್ನು ಕುಟುಂಬಕ್ಕೆ ನೀಡಲಾಯಿತು.
ಸಂಘದ ಮನವಿ ಸ್ಪಂದಿಸಿ ನೆರವು ನೀಡಿದ ಎಲ್ಲರಿಗೂ ಸಂಘ ಕೃತಜ್ಞತೆ ಸಲ್ಲಿಸುತ್ತದೆ.