ಉಡುಪಿ : ಉಡುಪಿ ಜನತೆಯ ಉತ್ತಮ ಸ್ಪಂದನೆ ನಡುವೆ ಇಂದು ಮತ್ತು ನಾಳೆ ಡಯಾನಾ ಹೋಟೆಲ್, ಜೋಡುಕಟ್ಟೆ ರಸ್ತೆಯಲ್ಲಿ ಮಲ್ಹಾರ್ ಫ್ಯಾಷನ್ ಮೇಳ 2026 ಹಾಗೂ ಅದಕ್ಕೆ ಸಂಬಂದಿಸಿದ ಬೃಹತ್ ಮಾರಾಟ ನಡೆಯುತ್ತಿದೆ. ಕಾರ್ಯಕ್ರಮವು ಬೆಳಿಗ್ಗೆ 11:00 ರಿಂದ ರಾತ್ರಿ 8:30 ರವರೆಗೆ ನಡೆಯಲಿದೆ.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ, ಮೇಳದ ಭರ್ಜರಿ ಶೇಲ್ ಹಾಗೂ ಅಲ್ಲಿ ದೊರಕುವ ಬ್ರಾಂಡೆಡ್ ವಸ್ತುಗಳ ಅನಾವರಣ ನೆರವೇರಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು, ಪರ್ಫ್ಯೂಮ್‌ಗಳು, ಮಫಿನ್ ಕೇಕ್‌ಗಳು, ಬ್ಯಾಗ್‌ಗಳು, ಬೆಡ್‌ಶೀಟ್‌ಗಳು ಸೇರಿದಂತೆ ಹಲವು ವೈಭವೋಪೇತ ವಸ್ತುಗಳನ್ನು ಇರಿಸಲಾಯಿತು.
ಮೊದಲ ಬಾರಿಗೆ ಎಲ್ಲಾ ಬ್ರಾಂಡೆಡ್ ಸಲ್ವಾರ್‌ಗಳು, ಸೀರೆಗಳು, ಪರ್ಫ್ಯೂಮ್, ಕೇಕ್ ಮತ್ತು ಫ್ಯಾಷನ್ ಪರಿಕರಗಳು ಸಮಂಜಸವಾದ ಬೆಲೆಯೊಂದಿಗೆ ವೀಕ್ಷಕರಿಗೆ ಲಭ್ಯವಾಗಿವೆ. ಜನರು ಕುಟುಂಬದೊಂದಿಗೆ ಉತ್ಸವಾತ್ಮಕ ವಾತಾವರಣದಲ್ಲಿ ಶಾಪಿಂಗ್ ಮಾಡುವ ಅವಕಾಶವನ್ನು ಪ್ರಯೋಜನಪಡಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಲಯನ್ ಗಿರಿಜಾ ಶಿವರಾಮ್ ಶೆಟ್ಟಿ, ಶಕೀಲಾ ಆಶಾ ರಾಮ್ ಶೆಟ್ಟಿ, ವೀಣಾ ಜೀವನ್ ಶೆಟ್ಟಿ, ರತ್ನ ಅಶೋಕ್ ಶೆಟ್ಟಿ, ಗೀತಾಂಜಲಿ ಸುವರ್ಣ, ನಿರೂಪಕ ಪ್ರಸಾದ್ ಶೆಟ್ಟಿ, ಸಂಧ್ಯಾ ರಮೇಶ್ ಮತ್ತು ಕಾರ್ಯಕ್ರಮದ ಆಯೋಜಕಿ ವೈಶಾಲಿ ಶೆಟ್ಟಿ ಉಪಸ್ಥಿತರಿದ್ದರು.
ಜನರು ಮಿಸ್ ಮಾಡಿಕೊಳ್ಳಬೇಡಿ: ಉಡುಪಿ ಜನತೆಗೆ ಇದು ವರ್ಷಾಂತ್ಯದ ಫ್ಯಾಷನ್ ಹಬ್ಬ, ವಿಶೇಷ ಶೇಲ್ ಮತ್ತು ಬ್ರಾಂಡೆಡ್ ವಸ್ತುಗಳನ್ನು ಪಡೆಯಲು ಅದ್ಭುತ ಅವಕಾಶವಾಗಿದೆ.
ವರದಿ ವಿನೋದ್ ಶೆಟ್ಟಿ ಉಡುಪಿ

