ಡಿಸೆಂಬರ್ 13ರಂದು ಉಡುಪಿಯ ಅಜ್ಜರಕಾಡು ಸ್ಟೇಡಿಯಂನಲ್ಲಿ ನಡೆದ 8ನೇ ರಾಷ್ಟ್ರ ಮಟ್ಟದ ತುಳುನಾಡು ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಿಜಾರಿನ ಸಾಯಿಶ ಎಸ್ ಶೆಟ್ಟಿ ಇವರು ಭಾಗವಹಿಸಿ ಚಿನ್ನದ ಪದಕ ಕುಮಿಟೆ (ಫೈಟಿಂಗ್ )ನಲ್ಲಿ ಹಾಗೂ ಕಂಚಿನ ಪದಕ ಕಟಾ ವಿಭಾಗದಲ್ಲಿ ಪಡೆದಿದ್ದಾರೆ. ಇವರು ಆಳ್ವಾಸ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಮಿಜಾರಿನ ಸಚಿನ್ ಶೆಟ್ಟಿ ಹಾಗೂ ಮೃಣಾಲಿ ಶೆಟ್ಟಿ ಯವರ ಸುಪುತ್ರಿ .

