ಉಡುಪಿ ಪರ್ಯಾಯೋತ್ಸವ : ಕೋಸ್ಟಲ್ ಸ್ಟಾರ್ ವೇದಿಕೆಯಲ್ಲಿ ‘ಸಂಗೀತ ವೈಭವ’ ಕಾರ್ಯಕ್ರಮ

0
72

ಉಡುಪಿ : ಪರ್ಯಾಯೋತ್ಸವದ ಅಂಗವಾಗಿ ಕೋಸ್ಟಲ್ ಸ್ಟಾರ್ ವೇದಿಕೆಯಲ್ಲಿ ಕರ್ನಾಟಕ ಬ್ಯಾಂಕ್ ಮುಖ್ಯಪ್ರಾಯೋಜಕತ್ವ ಹಾಗೂ ತಾಂಬೂಲಮ್ ಮತ್ತು ಕಲ್ಯಾಣ್ ಜ್ಯುವೆಲರ್ಸ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ‘ಸಂಗೀತ ವೈಭವ’ ಕಾರ್ಯಕ್ರಮ ಭವ್ಯವಾಗಿ ನಡೆಯಿತು.

ಖ್ಯಾತ ಸಂಗೀತ ನಿರ್ದೇಶಕ ಶ್ರೀಯುತ ವಿ. ಮನೋಹರ್ ಅವರ ಉಪಸ್ಥಿತಿಯಲ್ಲಿ, ಖ್ಯಾತ ಉದ್ಯಮಿ ಶ್ರೀಯುತ ತಲ್ಲೂರು ಶಿವರಾಮಶೆಟ್ಟಿ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಶ್ರೀಯುತ ರಮೇಶ್ ವೈದ್ಯ ಹಾಗೂ ವೆಂಕಿಸ್ ಸ್ಟೇ ಇನ್‌ನ ಮಾಲಕರಾದ ಶ್ರೀಯುತ ಚೇತನ್ ಅವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಕೋರ್ ಕಮಿಟಿ ಸದಸ್ಯರಾದ ಶ್ರೀಯುತ ಸತೀಶ್ಚಂದ್ರ ಹಾಗೂ ಶ್ರೀಮತಿ ಶೃತಿ ಜಿ. ಶೆಣೈ ಉಪಸ್ಥಿತರಿದ್ದರು.

ಸಂಸ್ಥೆಯ ಆಯೋಜಕರಾದ ಪ್ರಕಾಶ್ ಕಾಮತ್, ವೆಂಕಟೇಶ್ ಕಾಮತ್ ಹಾಗೂ ವಂದಿತಾ ಕಾಮತ್ ಅವರ ನೇತೃತ್ವದಲ್ಲಿ ಸತತ ಎಂಟು ಗಂಟೆಗಳ ಕಾಲ ನಿರಂತರ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯುವ ಮೂಲಕ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು.

ಸಂಸ್ಥೆಯ ಎಲ್ಲಾ ಸದಸ್ಯರು ಸಂಗೀತ ದಿಗ್ಗಜರಾದ ಮಾಲಿನಿ ಕೇಶವ ಪ್ರಸಾದ್, ಶ್ರೀಯುತ ರಮೇಶ್ಚಂದ್ರ, ಶ್ರೀಯುತ ರವೀಂದ್ರ ಪ್ರಭು ಹಾಗೂ ರೇಷ್ಮಾ ಮಂಜುನಾಥ್ ಅವರೊಂದಿಗೆ ಹಾಡಿ ವೇದಿಕೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು. ಜ್ಯೂನಿಯರ್ ಗುರುಕಿರಣ್ ಹಾಗೂ ಜ್ಯೂನಿಯರ್ ವಿಷ್ಣುವರ್ಧನ್ ಅವರ ಅಭಿನಯಗಳು ವಿಶೇಷ ಗಮನಸೆಳೆಯಿತು. ಜನಸಾಗರದ ಮಧ್ಯೆ ಸಂಗೀತಾಭಿಮಾನಿಗಳು ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

LEAVE A REPLY

Please enter your comment!
Please enter your name here