ಉಡುಪಿ : ಇಲ್ಲಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಜಿ.ಎಸ್.ಬಿ.ಮಹಿಳಾ ಮಂಡಳಿ, ಉಡುಪಿ ಇವರ ನೇತೃತ್ವದಲ್ಲಿ ಐ. ನೀಡ್ಸ್ ಒಪ್ಟಿಕಲ್ಸ್ , ಉಡುಪಿ ಹಾಗೂ ಮಣಿಪಾಲ ಇವರ ಜಂಟಿ ಸಹಯೋಗದೊಂದಿಗೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಭುವನೇಂದ್ರ ಮಂಟಪದಲ್ಲಿ ರವಿವಾರದಂದು ಉಚಿತ ನೇತ್ರ ತಪಾಸಣಾ ಶಿಬಿರವನ್ನು ದೇವಸ್ಥಾನದ ಮುಕ್ತೇಸರ ಪಿ.ವಿ ಶೆಣೈ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.
ವೇದಿಕೆಯಲ್ಲಿ ಉಡುಪಿಯ ಮಿತ್ರ ಆಸ್ಪತ್ರೆಯ ಹಿರಿಯ ನೇತ್ರ ತಜ್ಞರಾಗಿರುವ ಡಾ. ಎ.ಎಲ್. ರಾವ್ ರವರ ನೇತೃತ್ವದಲ್ಲಿ ನೇತ್ರ ತಪಾಸಣಾ ಶಿಬಿರ ನೆಡೆಯಿತು . ಐ.ನೀಡ್ಸ್ ಒಪ್ಟಿಕಲ್ಸ್ ಮಣಿಪಾಲ, ವ್ಯವಸ್ಥಾಪಕ ನಿರ್ದೇಶಕರು ಗಜಾನನ ನಾಯಕ್ ಹರಿಖಂಡಿಗೆ, ಜಿ.ಎಸ್.ಬಿ.ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಶೆಣೈ ,ಪ್ರದೀಪ್ ರಾವ್ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 105 ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆಯ ಸದುಪಯೋಗ ಪಡೆದರು.