ವರದಿ ರಾಯಿ ರಾಜ ಕುಮಾರ.
ತೆಂಕ ಮಿಜಾರು ಗ್ರಾಮದ ಉಳಯಂಗಡಿ ಎಂಬಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲು ಶಿಲನ್ಯಾಸವನ್ನು ನೆರವೇರಿಸಲಾಯಿತು. ಒಂದನೇ ವಾರ್ಡಿನ ಪ್ರದೇಶದಲ್ಲಿ ಹೊಸ ಮಾರುಕಟ್ಟೆಗೆ ಶಿಲನ್ಯಾಸವನ್ನು ಕೂಡ ಈ ಸಂದರ್ಭದಲ್ಲಿ ಹಾಕಲಾಯಿತು.
ಮುಲ್ಕಿ ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಶಿಲನ್ಯಾಸವನ್ನು ನೆರವೇರಿಸಿ , ಆದಷ್ಟು ಶೀಘ್ರದಲ್ಲಿ ಮಾರುಕಟ್ಟೆ ಹಾಗೂ ಅಂಗನವಾಡಿ ರಚನೆಗೊಂಡು ಸಾರ್ವಜನಿಕ ಉಪಯೋಗಕ್ಕೆ ಲಭಿಸಲಿ ಎಂದು ಹಾರೈಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕ್ಕೆ ಶುಭ, ಪಿಡಿಒ ರೋಹಿಣಿ, ಪಂಚಾಯತ್ ನ ಕಾರ್ಯದರ್ಶಿ ರಮೇಶ್ ಹಾಗೂ ಎಲ್ಲ ಸದಸ್ಯರು ಮತ್ತು ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
.

