ಬೆಳ್ಮಣ್‌ ಲಯನ್ಸ್‌ ನಿಂದ ವಿಶ್ವ ಸಂಸ್ಥೆ ದಿನಾಚರಣೆ

0
5

ಲಯನ್ಸ್‌ ಕ್ಲಬ್‌ ಬೆಳ್ಮಣ್‌ ವತಿಯಿಂದ ವಿಶ್ವ ಸಂಸ್ಥೆ ಜಯಂತಿಯನ್ನು ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಸಲಾಯಿತು.

ನಿವೃತ್ತ ಪ್ರಾಧ್ಯಪಕರಾದ ಲಯನ್‌ ಬಿ ಸೀತಾರಾಮ್‌ ಭಟ್‌ ವಿಶ್ವ ಸಂಸ್ಥೆಯ ಹುಟ್ಟು, ಅದರ ಉದ್ದೇಶ ಮತ್ತು ಲಯನ್ಸ್‌ ಅಂತರಾಷ್ಟ್ರೀಯ ಲಯನ್ಸ್‌ ಸಂಸ್ಥೆಯೊಂದಿಗಿನ ಸಂಬಂಧಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಲಯನ್‌ ಎನ್‌ ಎಮ್‌ ಹೆಗಡೆ, ಲಯನ್‌ ಸದಾನಂದ ಭಟ್‌, ಲಯನ್‌ ರಂಜಿತ್‌ ಕೆ ಎಸ್‌, ಲಯನ್‌ ಆಶಾ ಭಟ್‌ ಉಪಸ್ಥಿತರಿದ್ದರು. ಲಯಲ್ಸ್‌ ಕ್ಲಬ್‌ ಬೆಳ್ಮಣ್‌ ನ ಕಾರ್ಯದರ್ಶಿ ಲಯನ್‌ ಟೀನಾ ಡೆಸಾ ಕಾರ್ಯಕ್ರಮವನ್ನು ಸಂಘಟಿಸಿದರು.