ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲಿಕಲ್ಲು ನಾಗಭೂಷಣ ರಾವ್ ಇವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮ ಫಲಕ ಅನಾವರಣ

0
5

ಸ್ವರಾಜ್ಯ ೭೫ ತಂಡ ದ 38ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮದಲ್ಲಿ ಕನ್ನಡ ವಿಭಾಗ ಡಾ.ಬಿ.ಬಿ.ಹೆಗ್ಡೆ ಪ್ರ ದರ್ಜೆ ಕಾಲೇಜು ಕುಂದಾಪುರ , ಹಸ್ತ ಚಿತ್ರ ಫೌಂಡೇಶನ್ (ರಿ) ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ,ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಆದಿಮ ಕಲಾ ಟ್ರಸ್ಟ್ (ರಿ) ಕಾಯ೯ಕ್ರಮ ನಮ್ಮೊಂದಿಗೆ (“ಸ್ವರಾಜ್ಯ ೭೫ ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.

ಕಾಯ೯ಕ್ರಮದ ಮೊದಲಿಗೆ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಇವರು ರಾಷ್ಟ್ರ ಧ್ವಜಕ್ಕೆ ಪುಷ್ಪಾಚ೯ನೆಯನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನೆರೆದ ಗಣ್ಯರು ಪುಷ್ಪಾರ್ಚನೆಗೈದರು.

ಕಾಯ೯ಕ್ರಮದಲ್ಲಿ ಕರುಣಾಕರ ಗಾಣಿಗ ಬಸ್ರೂರು ನಿವೃತ್ತ ಸೈನಿಕರು ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಅನಾವರಣ ಮಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಗಿರೀಶ್ ಅಂಪಾರು ವಂದೇ ಮಾತರಂ ೧೫೦ ರ ಸಂಭ್ರಮ ವಿಚಾರ ಹಂಚಿಕೊಂಡರು.

ಗಣ್ಯರಾಗಿ ಡಾ.ಚೇತನ್ ಶೆಟ್ಟಿ ಕೋವಾಡಿ,ಡಾ.ವಿಶ್ವೇಶ್ವರ ರಾವ್,ಡಾ.ವನಿತಾ ಲಕ್ಷ್ಮೀ, ಶ್ರೀ ನರೇಂದ್ರ ಕುಮಾರ್ ಕೋಟ,ಜ್ಯೋತಿ ಸಾಲಿಗ್ರಾಮ, ವಿಚಾರ ಹಂಚಿಕೊಂಡರು

ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ದಿನಕರ ಆರ್ ಶೆಟ್ಟಿ ವಹಿಸಿದ್ದರು.

ಕಾಯ೯ಕ್ರಮದಲ್ಲಿ ಕನ್ನಡ ವಿಭಾಗ ಘಟಕ ಕಾಲೇಜಿನ ಬೊಧಕ ಸಿಬ್ಬಂದಿಯವರು ವಿಧ್ಯಾಥಿ೯ಗಳು, ಕುಟುಂಬಸ್ಥರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಪ್ರಾಸ್ತಾವಿಕ ವಿಚಾರವನ್ನು ಕಾಯ೯ಕ್ರಮ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು. ನಿರೂಪಣೆ ಹಾಗೂ ಧನ್ಯವಾದವನ್ನು ಅನುಶ್ರೀ ಜಡ್ಕಲ್ ನಡೆಸಿದರು.ಕಾರ್ಯಕ್ರಮದಲ್ಲಿ ವಂದೇ ಮಾತರಂ ನ್ನು ರೂಪಾ ಪೈ ಹಾಡಿ ಚಾಲನೆ ನೀಡಿ ನಂತರ ಸರ್ವರೂ ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯ ಗೊಳಿಸಿದರು.