ವಿ. ಆರ್. ಸತೀಶ್ ಆಚಾರ್ಯ ವರಂಗ ಇವರಿಗೆ ರಂಗಭೂಮಿ ಕಲಾರತ್ನ ಪ್ರಶಸ್ತಿ

0
34

2025-26 ಸಾಲಿನ 27.12.2025 ಶನಿವಾರದಂದು ದಾವಣಗೆರೆಯಲ್ಲಿ ನಡೆದ, ಎಸ್ ಎಸ್ ಪಾಟೀಲ್ ಹುಬ್ಬಳ್ಳಿ ಇವರ ಸಾರಥ್ಯದಲ್ಲಿ ವಿಶ್ವ ದರ್ಶನ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ , ನಮ್ಮೂರಿನ ಹೆಮ್ಮೆಯ ರಂಗಭೂಮಿ ಕಲಾವಿದರಾದ ವಿ ಆರ್ ಸತೀಶ್ ಆಚಾರ್ಯ ವರಂಗ ಹೆಬ್ರಿ ತಾಲೂಕು ಇವರು, ನಾಟಕ ರಚನೆ ನಟನೆ, ನಿರ್ದೇಶನ, ಕವಿ ಗೋಷ್ಠಿ, ಯಕ್ಷಗಾನ, ಸಿನಿಮಾ ಕ್ಷೇತ್ರ, ಕಲಾವಿದ ರಾದ ಇವರಿಗೆ
ರಂಗ ಭೂಮಿ ಕಲಾರತ್ನ ರಾಷ್ಟ್ರೀಯ ( ನ್ಯಾಷನಲ್ ಅವಾರ್ಡ್ )ಪ್ರಶಸ್ತಿ ಲಭಿಸಿರುತ್ತದೆ.
ಈ ಕಾರ್ಯಕ್ರಮಕ್ಕೆ, ಹರ ಗುರು ಶರಣರು ಆಶೀರ್ವದಿಸಿದರು, ಹಾಗೂ ಹಲವಾರು ಗಣ್ಯರು, ಭಾಗವಹಿಸಿದ್ದರು. ಸಂಪಾದಕರಾದ ಎಸ್. ಕೆ. ಪಾಟೀಲ್ ಇವರು ವಿಶ್ವ ದರ್ಶನ ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಹಲವಾರು ಸಾಧಕರಿಗೆ ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here