
ಮೂಡುಬಿದಿರೆ: ಕಳೆದ ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಆನೆಗುಡ್ಡೆಯ ಗುರುಪ್ರಸಾದ್ ಭಟ್ ಅವರ ಮೃತದೇಹವನ್ನು ಭಾನುವಾರ ಈಜು ತಜ್ಞ ಈಶ್ವರ್ ಮಲ್ಪೆ ತಂಡ, ಸ್ಥಳೀಯರ ಸಹಕಾರದೊಂದಿಗೆ ಮೇಲಕ್ಕೆತ್ತಿದ್ದಾರೆ.

ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಅದರ ಹಲಗೆಯನ್ನು ತೆಗೆಯಲೆಂದು ಗುರುಪ್ರಸಾದ್ ಅವರು ಕೆಳಗಿಳಿಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದರು.
ಭಾನುವಾರ ಈಶ್ವರ್ ಮಲ್ಪೆ ಅವರ ತಂಡ ನೀರಿಗೆ ಇಳಿದು ಹುಡುಕಾಟ ನಡೆಸಿ ಶಿರ್ತಾಡಿಯ ಕಜೆ ಬಳಿಯ ಇಜಿನಕಟ್ಟ ಎಂಬಲ್ಲಿ ಪೊದೆಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಮೃತ ದೇಹವನ್ನು ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ.