ಇಂದಿನ ಅನಾರೋಗ್ಯಕ್ಕೆ ಆಧುನಿಕ ಜೀವನಶೈಲಿ ಪ್ರಮುಖ ಕಾರಣ: ಶಾಸಕ ಪೂಂಜ

0
176

ವೇಣೂರು: ಬ್ರಹತ್ ಉಚಿತ ವೈದ್ಯಕೀಯ, ಹೃದಯ ರೋಗ, ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಶಿಬಿರದ ಉದ್ಘಾಟನೆ

ವೇಣೂರು: ಇಂದಿನ ಅನಾರೋಗ್ಯಕ್ಕೆ ಆಧುನಿಕ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ. ಇಂದಿನ ದಾವಂತದ ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಮಯವಿಲ್ಲದಂತಾಗಿದೆ. ನಾವು ಪ್ರತಿ ನಿತ್ಯ ಸೇವಿಸುವ ಆಹಾರ ಬಗ್ಗೆ ನಮಗೆ ಕಾಳಜಿ ವಹಿಸುವ ಅಗತ್ಯ ಇದ್ದು, ಮನೆಗೆ ಬೇಕಾಗುವ ತರಕಾರಿಯನ್ನು ಮನೆಯಲ್ಲಿ ನಾವೇ ಬೆಳೆದು ಸೇವಿಸುವುದು ಹೆಚ್ಚು ಆರೋಗ್ಯಕರ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಹೇಳಿದರು.

ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಜರಗಿದ ಬ್ರಹತ್ ಉಚಿತ ವೈದ್ಯಕೀಯ ಹೃದಯ ರೋಗ ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ತಾವರ Kmc ಆಸ್ಪತ್ರೆಯ ನುರಿತ ವೈದ್ಯರ ಮಾರ್ಗದರ್ಶನ ದಲ್ಲಿ ಕ್ಯಾನ್ಸರ್ ತಪಾಸಣೆ ಯನ್ನು ಪುರುಷ ರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾಗಿ ತಪಾಸಣೆ ನಡೆಸಲಾಯಿತು. ರಕ್ತದಾನ ಶಿಬಿರ ಆಯೋಜನೆ ಮಾಡಲಾಯಿತು. ಬಹಳಷ್ಟು ಮಂದಿ ರಕ್ತದಾನ ಭಾಗವಹಿಸಿದರು, ಸಾಮಾನ್ಯ ರೋಗ ವಿಭಾಗ, ಎಲಬು ಮತ್ತು ಕಿಲುರೋಗ ವಿಭಾಗ ಕಿವಿ, ಮೂಗು ಮತ್ತು ಗಂಟಲು ವಿಭಾಗ ಕ್ಯಾನ್ಸರ್ ವಿಭಾಗ, ಕಣ್ಣಿನ ವಿಭಾಗ ಹೃದಯ ವಿಭಾಗವಾಗಿ ವಿಂಗಡಣೆ ಮಾಡಿ ತಪಾಸಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗಾಂಧಿನಗರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಜಗದೀಶ್ ನಾಯಕ್, ವೇಣೂರು ಸಿ.ಎ. ಬ್ಯಾಂಕಿನ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ, skdrdp bc ಟ್ರಸ್ಟ್ ಯೋಜನಾಧಿಕಾರಿ ಅಶೋಕ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಸೀತಾರಾಮ್ ರೈ , ಪೂರ್ಣಚಂದ್ರ ಸೇವಾ ಪ್ರತಿಷ್ಠಾಪನ ಅಧ್ಯಕ್ಷ ಮುರಳಿಧರ್ ಪ್ರಭು, ಬಂಟರ ಗ್ರಾಮ ಸಮಿತಿ ಅಧ್ಯಕ್ಷರು ರವಿಚಂದ್ರ ಶೆಟ್ಟಿ ಮತ್ತು ಮಂಜುನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ದಿನೇಶ್ ಶೆಟ್ಟಿ, ಕ್ರಿಸ್ತರಾಜ ದೇವಾಲಯ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ವೇಣೂರು ಘಟಕದ ಅಧ್ಯಕ್ಷರು ಅರುಣ ಮತ್ತು ಜಸ್ವಿನ್ ಲೋಬೊ ವಲಯದ ಮೇಲ್ವಿಚಾರಕರಾದ ಶಾಲಿನಿ, ಒಕ್ಕೂಟದ ಅಧ್ಯಕ್ಷರುಗಳಾದ ವಿನ್ಸೆಂಟ್ ವಿಲಿಯಂ, ರೇಗು ಮತ್ತು ಪ್ರವೀಣ್ ನಾಯಕ್ ರಮೇಶ್ ನಾಯಕ್ ಸ್ವಾಗತಿಸಿದರು. ಸೇವಾ ಪ್ರತಿನಿಧಿಯಾದ ಶೋಭಾ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here