ವೇಣೂರು: ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇಲ್ಲಿ ಜೀರ್ಣೋದ್ದಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ವತಿಯಿಂದ ದೇಗುಲ ಪುನರ್ ನಿರ್ಮಾಣದ ದಾನಿ ದಿ. ಕಮಲ ಬಂಗೇರರ ಶ್ರದ್ಧಾಂಜಲಿ ಸಭೆ ನಡೆಯಿತು.
ಬೆಳ್ತಂಗಡಿ ಶಾಸಕರಾದ ಹರೀಶ ಪೂಂಜ , ವ್ಯಸಮಿತಿಯ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಅಶೋಕ ಪಾಣೂರು, ಸೋಮಯ್ಯ ಎಚ್., ಜಯ ಸಾಲ್ಯಾನ್, ಜಾನಕಿ, ಯಜ್ಞನಾರಾಯಣ ಭಟ್ ಮತ್ತು ಪಿ .ಯನ್. ಪುರುಷೋತ್ತಮರಾವ್ ಇವರ ಬಗ್ಗೆ ಗುಣಗಾನ ಮಾಡಿದರು.
ಜೀರ್ಣೋದ್ಧಾರದ ಕಾಮಗಾರಿಗೆ ಈ ಹಿಂದೆ ರೂ. 30 ಲಕ್ಷ ನೀಡಿದ್ದು, ನಿಧನದ ಬಳಿಕ ಅವರ ಹೆಸರಿನಲ್ಲಿ ಕುಟುಂಬಸ್ಥರು ರೂ. 12,71,000 ರೂ ನೀಡಿದ್ದರು. ಕಮಲ ಬಂಗೇರರವರ ಹೆಸರಿನಲ್ಲಿ ಒಟ್ಟು 42,71,000 ರೂ. ದೇಣಿಗೆ ನೀಡಿದಂತಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಮೌನ ಪ್ರಾರ್ಥನೆ ಮಾಡಲಾಯಿತು. ಕೊರಗಪ್ಪರವರು ಕಾರ್ಯಕ್ರಮ ನಿರೂಪಿಸಿ, ಸತೀಶ ವಿ. ಧನ್ಯವಾದವಿತ್ತರು.