ವಿಶ್ವ ಕೊಂಕಣಿ ಕೇಂದ್ರ ಸಿ.ಎ. ಪವರ್ 25  ಇಂಟರ್ ಮತ್ತು  ಸಿ.ಎ ಫೈನಲ್ ಪರೀಕ್ಷಾ ಉಚಿತ ಸನಿವಾಸ ತರಬೇತಿ ಶಿಬಿರ

0
158

ವಿಶ್ವ ಕೊಂಕಣಿ ಕೇಂದ್ರ, ತ್ರಿಶಾ ಕ್ಲಾಸಸ್‌ನೊಂದಿಗೆ ಸಹಯೋಗದಲ್ಲಿ ಮತ್ತು ಯುಕೆ ಆಂಡ್ ಕೋ ಸಬಲೀಕರಣದೊಂದಿಗೆ, ಜನವರಿ 2026 ರ ಸಿಎ ಇಂಟರ್‌ಮೀಡಿಯೇಟ್ ಹಾಗೂ ಸಿಎ ಫೈನಲ್ ಪರೀಕ್ಷೆಗೆ ಹಾಜರಾಗುವ ಆಕಾಂಕ್ಷಿಗಳಿಗಾಗಿ ಸಿಎ ಪವರ್ 25 ರ ಏಳನೇ ಆವೃತ್ತಿಯನ್ನು ಹಾಗೂ ಸಿ ಎ ಫೈನಲ್ ಪರೀಕ್ಷೆಗೆ ಸಿಎ ಪವರ್ 25  ರ  ಎರಡನೇ ಆವೃತ್ತಿಯನ್ನು ಪ್ರಸ್ತುತಪಡಿಸುತ್ತದೆ – ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ ಈ ವಿಶಿಷ್ಟ ಪರಿಕಲ್ಪನೆ ಆಧಾರಿತ ಪುನರಾವರ್ತನೆ ವಸತಿ ಶಿಬಿರವಾಗಿದೆ. ಇದು ಜೀವಮಾನದ ಅನುಭವವನ್ನು ನೀಡುವ ಶಿಬಿರವಾಗಿದೆ. ಹಿಂದಿನ 6 ಋತುಗಳು ಉತ್ತಮ ಗುಣಮಟ್ಟದ ಪ್ರೋತ್ಸಾಹ ಮತ್ತು ಆತ್ಮ ವಿಶ್ವಾಸ ಬೆಳೆಸಿ, ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಫಲಿತಾಂಶ ಬಂದ ಮೇರೆಗೆ ಈ ವರ್ಷವೂ ಈ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಯು ಉತ್ತಮ ಶಿಕ್ಷಣದೊಂದಿಗೆ, ಉತ್ತಮ ಉಚಿತವಾದ ವಸತಿ ಬಳಕೆ, ಊಟೋಪಚಾರ ಹಾಗೂ ಕಲಿಕಾ ಸಾಮಾಗ್ರಿಗಳನ್ನು ಒಳಗೊಂಡಿದೆ. ಆಕಾಂಕ್ಷಿಗಳು ಈ ಅವಕಾಶವನ್ನು ಪಡೆದುಕೊಳ್ಳಲು ಹಾಗೂ ಆನ್ಲೈನ್ ಅರ್ಜಿ ಸಲ್ಲಿಸಲು- ಈ ಕೆಳಗಿನ ಲಿಂಕ್ ನೊಂದಿಗೆ ಗೂಗಲ್ ಫಾರ್ಮ್ ನೋದಣಿ ಮಾಡಲು ಕೋರಲಾಗಿದೆ. 

ಸಿ.ಎ. ಪವರ್ 25  ಇಂಟರ್ ಆಕಾಂಕ್ಷಿಗಳಿಗೆ

CA Inter link: https://forms.gle/dHznjNrZGEdw3FHT8

ಸಿಎ ಫೈನಲ್ ಆಕಾಂಕ್ಷಿಗಳಿಗೆ

CA Final link:  https://forms.gle/7gVHz62jdMaUbhsR8

LEAVE A REPLY

Please enter your comment!
Please enter your name here