ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಸಹಿತ ಅವಿಭಜಿತ ದ.ಕ. ಜಿಲ್ಲೆಯ ಹಲವೆಡೆ ಪವಾಡಪುರುಷರಾಗಿದ್ದ ಅಯ್ಯ ಸ್ವಾಮಿಯವರ ಸಾನಿಧ್ಯ ಕ್ಷೇತ್ರವಾಗಿರುವ ಅಲಂಗಾರು ಗುರುಮಠದಲ್ಲಿ ನಡೆಸಲು ಉದ್ದೇಶಿಸಿರುವ ಸಮಗ್ರ ಜೀರ್ಣೋದ್ಧಾರ ಕಾರ್ಯಗಳ ಪೂರ್ವಭಾವಿಯಾಗಿ ವಿಶ್ವಕರ್ಮ ಯಜ್ಞ ಮತ್ತು ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನಮೂರ್ತಿ ಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ ಜರಗಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಕೇಶವ ತಂತ್ರಿವರ್ಯರ ಅಧ್ಯಕ್ಷತೆಯಲ್ಲಿ ಸಮಿತಿ ಗೌರವಾಧ್ಯಕ್ಷ ಧನಂಜಯ ಪಾಲ್ಕೆ, ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತರು, ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ ಇವರ ಉಪಸ್ಥಿತಿಯಲ್ಲಿ ಪೂ.ಗಂ. 11ಕ್ಕೆ ಧಾರ್ಮಿಕ ಸಭೆ ನಡೆಯಿತು. ವಿವಿಧ ಕಾಳಿಕಾಂಬಾ ದೇವಳಗಳ ಮೊಕ್ತೇಸರರು, ವಿವಿಧ ಸಮಿತಿಗಳ, ಸಂಘಟನೆಗಳ ಅಧ್ಯಕ್ಷರು, ಉದ್ಯಮಿಗಳು, ದಾನಿಗಳ ಸಹಿತ ಗಣ್ಯರು ಪಾಲ್ಗೊಂಡರು.

.

