ಶ್ರೀ ಕ್ಷೇತ್ರ ನೆಲ್ಲಿ ದೇವಸ್ಥಾನಕ್ಕೆ ಸಾಯಿ ಈಶ್ವರ್ ಗುರೂಜಿ ಭೇಟಿ

0
35

ನಿಟ್ಟೆ: ಶ್ರೀ ರಾಜರಾಜೇಶ್ವರಿ ಕ್ಷೇತ್ರ ಶ್ರೀ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ನಿಟ್ಟೆ ದೇವಸ್ಥಾನಕ್ಕೆ ಇಂದು ಶ್ರೀ ದ್ವಾರಕಮಯಿ ಮಠದ ಸಾಯಿ ಈಶ್ವರ್ ಗುರೂಜಿಯವರು ಭೇಟಿ ನೀಡಿದರು. ಅವರು ತಮ್ಮ ನೂರೆಂಟು ದಿನ ನೂರೆಂಟು ಮಠ ಮಂದಿರಗಳ ಭೇಟಿ ಹಾಗೂ ಅವರ ರಾಷ್ಟ್ರ ಧರ್ಮ ಹಾಗೂ ಹಿಂದೂಗಳ ರಕ್ಷಣೆ ಹಾಗೂ ಒಗ್ಗಟ್ಟು , ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿಯಾಗಬೇಕೆಂದು ಸಂಕಲ್ಪದೊಂದಿಗೆ ಎಲ್ಲಾ ಮಠ ಮಂದಿರಗಳಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ಹಾಗೆಯೇ ಶ್ರೀ ಕ್ಷೇತ್ರ ನೆಲ್ಲಿಗೆ ಭೇಟಿ ನೀಡಿ ದೇವಿಯ ಹಾಗೂ ಸದ್ಗುರು ನಿತ್ಯಾನಂದ ಸ್ವಾಮಿಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುನಿಲ್ ಕೆ ಆರ್, ಅರ್ಚಕರಾದ ನಿತ್ಯಾನಂದ ಭಟ್, ಮಹಾಬಲ ಸುವರ್ಣ ಮೈಲಾಜೆ ಮುಂತಾದ ಗಣ್ಯರು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here