ಮುಲ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಬಜಪೆ ಮುಲ್ಕಿ ವಲಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮುಲ್ಕಿ ವಲಯ ವತಿಯಿಂದ ಮುಲ್ಕಿ ವಿಜಯ ಕಾಲೇಜಿನಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅರ್ಪಿತ ಪ್ರಶಾಂತ್ ಶೆಟ್ಟಿ ಉಪನ್ಯಾಸಕಿ ಮಣಿಪಾಲ ಇವರು ಕಾಲೇಜು ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಗ್ರಾಮಾಭಿವೃದ್ದಿ ಬಜಪೆ ತಾಲೂಕು ಯೋಜನಾಧಿಕಾರಿ ಗಿರೀಶ್ ಎಂ, ಮುಲ್ಕಿ ವಲಯ ಜನಜಾಗೃತಿ ವಲಯ ಅಧ್ಯಕ್ಷರಾದ ವಿನೋದ್ ಸಾಲಿಯಾನ್ , ಮುಲ್ಕಿ ಒಕ್ಕೂಟ ಅಧ್ಯಕ್ಷರಾದ ಜಯಲಕ್ಷ್ಮಿ, ಮುಲ್ಕಿ ಕಾಲೇಜು ಪ್ರಾಂಶುಪಾಲರಾದ ಅರುಣ್ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಭಟ್ , ಯೋಜನೆಯ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸೇವಾ ಪ್ರತಿನಿಧಿ ರಾಜೀವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.