ವಿಟ್ಲ; ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಣೆ

0
168

ವಿಟ್ಲ: ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರುಗೊಂಡ ಮಂಜೂರಾತಿ ಪತ್ರಗಳ ವಿತರಣೆ ಕಾರ್ಯಕ್ರಮವನ್ನು ವಿಟ್ಲ ಪಂಚಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಕೃಷ್ಣಾಯ್ಯ ಬಲ್ಲಾಳ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಮಾತನಾಡಿ ಯೋಜನೆಯ ನಡೆದು ಬಂದ ದಾರಿ, ಪೂಜ್ಯರು ಸಮಾಜಕ್ಕೆ ಕೊಟ್ಟ ಕೊಡುಗೆಗಳು, ಕ್ಷೇತ್ರದಿಂದ ನಡೆಯುವ ಸೇವಾ ಚಟುವಟಿಕೆಗಳು ಬಗ್ಗೆ ಸವಿವಾರವಾಗಿ ಮಾಹಿತಿ ನೀಡಿದರು. ತಾಲೂಕು ಶಿಕ್ಷಣಧಿಕಾರಿಗಳಾದ ಮಂಜುನಾಥ್ M. G ಮಾತನಾಡಿ ಧರ್ಮಸ್ಥಳದಿಂದ ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹ, ಸರಕಾರಿ ಶಾಲೆ ಉಳಿಸುವಲ್ಲಿ ಪೂಜ್ಯರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಾಜಿ ಜನಜಾಗೃತಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ, ಕೆಯ್ಯುರ್ ನಾರಾಯಣ ಭಟ್, ಜನಜಾಗೃತಿ ಸದಸ್ಯರಾದ ನಟೇಶ್ ವಿಟ್ಲ, ಉಮಾನಾಥ್ ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಗೌಡ ಶುಭ ಹಾರೈಸಿದರು.
ವೇದಿಕೆಯಲ್ಲಿ ವಲಯದ ಅಧ್ಯಕ್ಷರುಗಳದ ರಾಜೇದ್ರ ರೈ, ಪ್ರಮೀಳಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ 136 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ಮತ್ತು 27 ಜ್ಞಾನದೀಪಾ ಶಿಕ್ಷಕರಿಗೆ ಉಡುಗೊರೆ ವಿತರಣೆ ಮಾಡಲಾಯಿತು. ಬಂದಿರುವ ಅತಿಥಿಗಳನ್ನು ಯೋಜನಾಧಿಕಾರಿ ಸುರೇಶ್ ಗೌಡ ಸ್ವಾಗತಿಸಿ, ವಿಟ್ಲ ವಲಯದ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here