ವಿಟ್ಲ : ಪ್ರಪ್ರಥಮ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ “ಆಕಾರ್ 2026”

0
8

ವಿಟ್ಲ : ತತ್ವ ಸ್ಕೂಲ್ ಆಫ್ ಆರ್ಟ್ ಅರ್ಪಿಸುವ ಆಕಾರ್ 2026 ಚಿತ್ರಕಲಾ ಪ್ರದರ್ಶನವು ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಜ. 18 ರಿಂದ ಜ 20 ವರೆಗೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿ. 18ರ ಭಾನುವಾರ ಬೆಳಗ್ಗೆ 9:30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಖಂಡಿಗ, ರೋಟರಿ ಕ್ಲಬ್ ವಿಟ್ಲದ ಇದರ ಅಧ್ಯಕ್ಷ RTN ಜೈ ಕಿಶನ್ ವಿಟ್ಲ, ವಿಟ್ಲ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ ಭಾಗಿಯಾಗಲಿದ್ದಾರೆ. ವಿಟ್ಲ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿಶಂಕರ ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಚಿತ್ರಕಲಾ ಪ್ರದರ್ಶನದ ವಿಶೇಷತೆಗಳು
ತತ್ವ ಸ್ಕೂಲ್ ಆಫ್ ಆರ್ಟ್ ವಿಟ್ಲದಲ್ಲಿ ಕಳೆದ 7 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಸ್ಥಳೀಯ ಮಕ್ಕಳಿಗೆ, ಚಿತ್ರಕಲಾ ಆಸಕ್ತರಿಗೆ ಚಿತ್ರಕಲೆಯ ವಿವಿಧ ಪ್ರಕಾರಗಳ ತರಬೇತಿಯನ್ನು ನೀಡಿಕೊಂಡು ಬರುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಒಟ್ಟು ಸೇರುವಿಕೆಯಲ್ಲಿ “ಆಕಾರ್” ಚಿತ್ರಕಲಾ ಪ್ರದರ್ಶನ ಆಯೋಜನೆ ಮಾಡಲಾಗುತ್ತಿದೆ. ತರಗತಿಯ 81 ವಿದ್ಯಾರ್ಥಿಗಳ ಆಯ್ದ ಕಲಾಕುಂಚವನ್ನು ಪ್ರದರ್ಶಿಸಲಾಗುತ್ತದೆ.

ಜ. 18 ರಿಂದ ಜ 20 ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ತತ್ವ ಸ್ಕೂಲ್ ಆಫ್ ಆರ್ಟ್ ಇಲ್ಲಿನ ವಿದ್ಯಾರ್ಥಿಗಳು (ಶಾಲಾ- ಕಾಲೇಜು ವಿದ್ಯಾರ್ಥಿಗಳು, ವಿವಿಧ ವಲಯದಲ್ಲಿನ ನೌಕರರು, ಆಸಕ್ತ‌ ಕಲಾ‌ ವಿದ್ಯಾರ್ಥಿಗಳು) ರಚಿಸಿದ ವೈವಿಧ್ಯಮ ಚಿತ್ರಗಳನ್ನು ಕಣ್ಣುಂಬಿಕೊಳ್ಳಬಹುದಾಗಿದೆ. ಆಯಿಲ್ ಪೆಸ್ಟಲ್, ಪೆನ್ಸಿಲ್ ಸ್ಕೆಚ್, ಪೆನ್ ಆರ್ಟ್, ಆಕ್ರಲಿಕ್, ಕ್ಯಾನ್ವಸ್, ಪೋಸ್ಟರ್ ಕಲರ್, ಜಲವರ್ಣ ಹೀಗೆ ವಿವಿಧ ಪ್ರಕಾರಗಳ ಚಿತ್ರಕಲೆಯನ್ನು ವೀಕ್ಷಿಸಬಹುದು. ಗ್ರಾಮೀಣ ಮಟ್ಟದಲ್ಲಿ ಇಷ್ಟೊಂದು ಸಮಗ್ರ ಚಿತ್ರಕಲಾ ಪ್ರದರ್ಶನ ಇದೇ ಮೊದಲನೇಯದಾಗಿದೆ. ಕಲಾಸಕ್ತರು ಈ ಚಿತ್ರಕಲಾ ಪ್ರದರ್ಶನದಲ್ಲಿ ಭಾಗಿಯಾಗಬಹುದೆಂದು ಸಂಸ್ಥೆಯ ನಿರ್ದೇಶಕ ಟೀಲಾಕ್ಷ, ಪ್ರಾಂಶುಪಾಲರು ರಶ್ಮಿ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here