Saturday, June 14, 2025
Homeಪುತ್ತೂರುವಿವೇಕಾನಂದ ಪದವಿ ಪೂರ್ವ ಕಾಲೇಜಿನ ರ್ತಿಯಂದ ಕಾಲೇಜು ಬಸ್ಸುಗಳಿಗೆ ಚಾಲನೆ

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ರ್ತಿಯಂದ ಕಾಲೇಜು ಬಸ್ಸುಗಳಿಗೆ ಚಾಲನೆ

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾರ್ಯನಿರ್ವಹಿಸುವ ಕಾಲೇಜಿನ ಬಸ್ಸುಗಳಿಗೆ ದಿನಾಂಕ 2-06-2025 ರಂದು ಚಾಲನೆ ನೀಡಲಾಯಿತು.

ಕಾಟುಕಕ್ಕೆ ಹಾಗೂ ಪಾಣಾಜೆ ಮಾರ್ಗವಾಗಿ ಸಂಚರಿಸುವ ಕಾಲೇಜಿನ ಬಸ್ಸಿಗೆ ವಿಠಲ್‌ ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಜಯರಾಯ ರೈ ಡಿ ಇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಗಿ ಫುಡ್‌ ಪ್ರಾಡಕ್ಟ್‌ ಇದರ ಮಾಲಕರಾದ ಯೋಗೀಶ್‌ ಖಂಡೇರಿ, ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್‌ ಹಾಗೂ ಸ್ಥಳೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅದೇ ರೀತಿ ಕೌಡಿಚ್ಚಾರ್‌ ಮಾರ್ಗವಾಗಿ ಸಂಚರಿಸುವ ಕಾಲೇಜು ಬಸ್ಸಿನ ಉದ್ಘಾಟನೆಯನ್ನು ನನ್ಯ ಅಚ್ಚುತ್ತಮೂಡಿತ್ತಾಯ ಇವರು ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಮ್‌ ದೇವಿಚರಣ್‌ ರೈ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಈ ಬಸ್ಸಿನ ಸದುಪಯೋಗವನ್ನು ವಿವೇಕಾನಂದ ವಿವಿಧ ಸಂಸ್ಥೆಗಳ ಆಧ್ಯಾಪಕರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ.

RELATED ARTICLES
- Advertisment -
Google search engine

Most Popular