ಮೂಡುಬಿದಿರೆ : ಪೊಲೀಸ್ ಠಾಣೆ ಮೂಡುಬಿದಿರೆಯಲ್ಲಿ ದಾಖಲಾಗಿರುವ ಆರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯ ವಾರೆಂಟ್ ಜಾರಿ ಕರ್ತವ್ಯದ ಹೆಚ್.ಸಿ. ರವೀಂದ್ರ, ಪಿ.ಸಿ. ಲಿಂಗೇಶ್ ಹಾಗೂ ಕೋರ್ಟ್ ಪಿ.ಸಿ. ರಮೇಶ್ ಅವರು ಕಾರ್ಯಾಚರಣೆ ನಡೆಸಿ ಅಬೂಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬೂಬಕ್ಕರ್, ಮೊಹಮ್ಮದ್ ಅಚ್ಚಬ್ಬ ಅವರ ಪುತ್ರ, ಮೂಲತಃ ಉಪ್ಪಳ್ಳಿ ಗ್ರಾಮ, ಚಿಕ್ಕಮಗಳೂರು ಜಿಲ್ಲೆ ಹಾಗೂ ಹಾಲಿ ಮೈಂದಗುರಿ, ಕೋಡಿಕೆರೆ, ಜೋಕಟ್ಟೆ ಗ್ರಾಮ, ಪಣಂಬೂರು, ಮಂಗಳೂರು ನಿವಾಸಿಯಾಗಿರುವ ಆರೋಪಿಯನ್ನು ಆ.28, 2026ರಂದು ಬಂಧಿಸಿದ್ದಾರೆ.
ಆರೋಪಿಯನ್ನು ಮೂಡುಬಿದಿರೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.15, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ಶಿರ್ವ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣೆ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

