ಪರಿಸರದ ಸಮತೋಲನಕ್ಕೆ ನೀರು ಅತ್ಯಗತ್ಯ : ರಾಘವೇಂದ್ರ ಕವಾ೯ಲು

0
14

ಉಡುಪಿ : ಗಿಡಮರಗಳು, ಪ್ರಾಣಿ-ಪಕ್ಷಿಗಳು ಮತ್ತು ಪರಿಸರದ ಸಮತೋಲನಕ್ಕೆ ನೀರು ಅತ್ಯಗತ್ಯ. ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು.
ಅವರು ಮಿಷನ್ ಆಸ್ಪತ್ರೆ ಉಡುಪಿ ಇದರ ವತಿಯಿಂದ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ನೀರು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ನೀರಿನ ಮಹತ್ವವನ್ನು ಅರಿಯದೆ ಬಹಳಷ್ಟು ಸಿದ್ಧ ನೀರನ್ನು ಪೋಲು ಮಾಡುತ್ತಿದ್ದೇವೆ ಇದು ಸಲ್ಲದು ನೀರನ್ನು ಹಿತ ಮಿತವಾಗಿ ಬಳಕೆ ಮಾಡಿ ಆ ಮೂಲಕ ಅಮೂಲ್ಯವಾದ ಸಂಪತ್ತನ್ನು ಉಳಿಸಬೇಕಾಗಿದೆ ಎಂದರು.

ವಿದ್ಯಾರ್ಥಿಗಳು ಈಗಿನಿಂದಲೇ ನೀರು ಉಳಿಸುವ ಅದೇ ರೀತಿ ಪ್ರಕೃತಿಯನ್ನು ಬೆಳೆಸುವ ಕಾರ್ಯ ಪ್ರಾರಂಭಿಸಬೇಕು ಎಂದು ಕರೆ ನೀಡಿದರು. ಮಿಷನ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಹಿ ರತ್ನಾಕರ್ ಶಾಲಾ ಮುಖ್ಯ ಶಿಕ್ಷಕಿ ಅನುರಾಧ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here