ದಾವಣಗೆರೆ : ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 25 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಬುದ್ಧ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.
ಈ ತಿಂಗಳ ಹುಣ್ಣಿಮೆಯ ಪೂಜಾ ಸೇವೆಯನ್ನು ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ಮತ್ತು ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ ಮತ್ತು ಕುಟುಂಬ, ಮತ್ತು ಕುಟುಂಬ, ಪ್ರೇಮ್‌ಜಿ ಪಾಟೀಲ್ ಮತ್ತು ವಿ.ಕೃಷ್ಣಮೂರ್ತಿ ಕುಟುಂಬದವರು ಸೇವೆ ಸಲ್ಲಿಸಿದರು. ಗಾಯಿತ್ರಿ ಪರಿವಾರದ ಸಂಚಾಲಕರಾದ ಭಾವನ್ನಾರಾಯಣ ಸತೀಶ್ ಆರ್.ಎಂ., ವಿಕ್ರಂಜೈನ್, ಚನ್ನಬಸಪ್ಪ ಶೀಲವಂತ, ಕೆ.ಸಿ.ಉಮೇಶ್, ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಸತ್ಯನಾರಾಯಣಮೂರ್ತಿ, ಲೋಹಿತಾಶ್ವ, ಶಾಂತಾರಾಮ, ಶ್ರೀಮತಿ ಆಶಾ ನಿತೀನ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

