ಅನೈತಿಕ ಸಂಬಂಧಕ್ಕೆ ತಡೆಯಾದ ಪತಿಯನ್ನು ಹತ್ಯೆ ಮಾಡಿದ ಪತ್ನಿ : ಮಾತುಕತೆಗೆ ಕರೆದು ಹತ್ಯೆ

0
726

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪತಿಯನ್ನು ಮಾತುಕತೆಗೆ ಕರೆದು ಹತ್ಯೆ ಮಾಡಿದ್ದ ವ್ಯಕ್ತಿ ಹಾಗೂ ಆತನ ಪ್ರೇಯಸಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪತಿಯನ್ನು ಮಾತುಕತೆಗೆ ಕರೆದು ಹತ್ಯೆ ಮಾಡಿದ್ದ ವ್ಯಕ್ತಿ ಹಾಗೂ ಆತನ ಪ್ರೇಯಸಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಟನ್‌ಪೇಟೆ ಭಕ್ಷಿ ಗಾರ್ಡನ್ ನಿವಾಸಿ ದಾದಾಪೀರ್ ಅಲಿಯಾಸ್ ದದ್ದು (25) ಮತ್ತು ಕೊಲೆಯಾದ ಸಮೀರ್‌ನ ಪತ್ನಿ ಉಮ್ಮೇ ಸಲ್ಮಾ ಅಲಿಯಾಸ್ ನಾಜಿಯಾ (22) ಬಂಧಿತರು. ಆರೋಪಿಗಳು ಏ.6ರ ರಾತ್ರಿ ತುರಹಳ್ಳಿ ಫಾರಸ್ಟ್ ಬಳಿ ಪಾದರಾಯನಪುರ ನಿವಾಸಿ ಸಮೀರ್‌ನನ್ನು (26) ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here