ವಿಪ್ರೋದಿಂದ ಸೆಪ್ಟೆಂಬರ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟಣೆ

0
30


ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ನಿವ್ವಳ ಆದಾಯ ಶೇ.2.5 ಹೆಚ್ಚಳ, ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಶೇ.1.2ರಷ್ಟು ಪ್ರಗತಿ
ಕ್ಯೂ2’ 26ರ ಹೊಂದಿಸಲಾದ ಆಪರೇಟಿಂಗ್ ಮಾರ್ಜಿನ್ ಶೇ.17.2 ಹೊಂದಾಣಿಕೆ, ವರ್ಷದಿಂದ ವರ್ಷಕ್ಕೆ ಶೇ.0.4 ವಿಸ್ತರಣೆ
2.9 ಬಿಲಿಯನ್ ಡಾಲರ್ ಬೃಹತ್ ಡೀಲ್ ಬುಕಿಂಗ್, ವರ್ಷದಿಂದ ವರ್ಷಕ್ಕೆ ಶೇ.90.5ರಷ್ಟು ಪ್ರಗತಿ
ಬೆಂಗಳೂರು, ಭಾರತ- ಅಕ್ಟೋಬರ್ 16, 2025: ಮುಂಚೂಣಿಯ ಎಐ-ಪವರ್ಡ್ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೋ ಲಿಮಿಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂಐಟಿ, ಬಿ.ಎಸ್.ಇ.: 507685, ಎನ್.ಎಸ್.ಇ: ವಿಪ್ರೋ) ಸೆಪ್ಟೆಂಬರ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಇಂಟರ್ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ (ಐ.ಎಫ್.ಆರ್.ಎಸ್.) ಅಡಿಯಲ್ಲಿ ಪ್ರಕಟಿಸಿದೆ.
ಫಲಿತಾಂಶಗಳ ಪ್ರಮುಖಾಂಶಗಳು

  1. ನಿವ್ವಳ ಆದಾಯ ₹22700 ಕೋಟಿ ($2,556 ಮಿಲಿಯನ್), ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.2.5 ಹೆಚ್ಚಳ ಮತ್ತು ವರ್ಷದಿಂದ ವರ್ಷಕ್ಕೆ ಶೇ.1.8 ಹೆಚ್ಚಳ
  2. ಐಟಿ ಸೇವೆಗಳ ವಲಯದ ಆದಾಯ $2604.3 ಮಿಲಿಯನ್ ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.7ರಷ್ಟು ಏರಿಕೆ
  3. ಈ ತ್ರೈಮಾಸಿಕದ ನಿವ್ವಳ ಲಾಭ ₹3,250 ಕೋಟಿ ($365.6 ಮಿಲಿಯನ್) ಇದ್ದು ವರ್ಷದಿಂದ ವರ್ಷಕ್ಕೆ ಶೇ.1.2ರಷ್ಟು ಏರಿಕೆ
  4. ದೊಡ್ಡ ಡೀಲ್ ಬುಕಿಂಗ್ ಗಳು4 $2,853 ಮಿಲಿಯನ್ ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕ್ಕೆ ಶೇ.6.7 ಮತ್ತು ವರ್ಷದಿಂದ ವರ್ಷಕ್ಕೆ ಶೇ.90.5 ಹೆಚ್ಚಳ
  5. ಕ್ಯೂ2’ 26ರ ಐಟಿ ಸೇವೆಗಳ ಹೊಂದಿಸಲಾದ ಆಪರೇಟಿಂಗ್ ಮಾರ್ಜಿನ್ ಶೇ.17.2 ಇದ್ದು ವರ್ಷದಿಂದ ವರ್ಷಕ್ಕೆ ಶೇ.0.4ರಷ್ಟಿದೆ.

ವಿಪ್ರೋ ಇಂದು ಸೆಪ್ಟೆಂಬರ್ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು ರೂ. 22,700 ಕೋಟಿ ನಿವ್ವಳ ಆದಾಯ ಮತ್ತು ರೂ.3,250 ಕೋಟಿ ಲಾಭ ಗಳಿಕೆಯನ್ನು ಪ್ರಕಟಿಸಿದೆ. ಈ ತ್ರೈಮಾಸಿಕಕ್ಕೆ ಐಟಿ ಸೇವೆಗಳ ಹೊಂದಾಣಿಕೆ ಮಾಡಲಾದ ಆಪರೇಟಿಂಗ್ ಶೇ.17.2 ಇದ್ದು ವರ್ಷದಿಂದ ವರ್ಷಕ್ಕೆ ಶೇ.0.4ರಷ್ಟು ವಿಸ್ತರಿಸಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು $2,853 ಮಿಲಿಯನ್ ದೊಡ್ಡ ಡೀಲ್ ಗಳನ್ನು ಬುಕ್ ಮಾಡಿದ್ದು ಅದು ವರ್ಷದಿಂದ ವರ್ಷಕ್ಕೆ ಶೇ.90.5ರಷ್ಟು ಹೆಚ್ಚಳ ಕಂಡಿದೆ.
ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಯಾ, “ನಮ್ಮ ಆದಾಯದ ವೇಗ ಸದೃಢಗೊಳ್ಳುತ್ತಿದ್ದು ಯೂರೋಪ್ ಮತ್ತು ಎಪಿಎಂಇಎ ಪ್ರಗತಿಯತ್ತ ಮರಳುತ್ತಿವೆ ಮತ್ತು ನಮ್ಮ ಆಪರೇಟಿಂಗ್ ಮಾರ್ಜಿನ್ ಗಳು ಸ್ಥಿರವಾಗಿವೆ. ಬುಕಿಂಗ್ ಗಳು 2026ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ $9.5 ಬಿಲಿಯನ್ ಮೀರಿವೆ. ನಮ್ಮ ಕಾರ್ಯತಂತ್ರ ಸ್ಪಷ್ಟವಾಗಿದೆ: ಸದೃಢವಾಗಿರುವುದು, ಜಾಗತಿಕ ಪರಿವರ್ತನೆಗಳಿಗೆ ಅಳವಡಿಸಿಕೊಳ್ಳುವುದು ಮತ್ತು ಎಐನೊಂದಿಗೆ ಮುನ್ನಡೆಯುವುದು. ವಿಪ್ರೋ ಇಂಟೆಲಿಜೆನ್ಸ್ ಅನ್ನು ನಮ್ಮ ಗ್ರಾಹಕರಿಗೆ ತರಲು ನಾನು ಬಹಳ ಉತ್ಸುಕನಾಗಿದ್ದು ಅವರಿಗೆ ವಿಶ್ವಾಸದಿಂದ ವಿಸ್ತರಿಸಲು ಮತ್ತು ಎಐ-ಪ್ರಥಮ ವಿಶ್ವದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತಿದ್ದೇವೆ” ಎಂದರು.
Contact for Media:
Dinesh Joshi
Dinesh.joshi@wipro.com
9205264001

LEAVE A REPLY

Please enter your comment!
Please enter your name here