ಮಂಗಳೂರು : ಕಸ್ತರ‍್ಬಾ ವೈದ್ಯಕೀಯ ಕಾಲೇಜು (ಕೆಎಂಸಿ), ಮಂಗಳೂರು ಮತ್ತು ಕೆಎಂಸಿ ಆಸ್ಪತ್ರೆ, ಅತ್ತಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಠರಗರುಳಿನ ಕ್ಯಾನ್ಸರ್(Gastrointestinal Cancers) ಕುರಿತಾದ ಎರಡು ದಿನಗಳ ಶೈಕ್ಷಣಿಕ ಸಮ್ಮೇಳನ ‘ಕೆಎಂಸಿ ಕ್ಯಾನ್ಸರ್ ಕಾನ್ಕ್ಲೇವ್ 2026’ ಅನ್ನು ಜನವರಿ 31 ಮತ್ತು ಫೆಬ್ರವರಿ 1, 2026 ರಂದು ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಮರೆನಾ ಸ್ಪರ‍್ಟ್ಸ್ ಮತ್ತು ಇಂಡೋರ್ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಲಾಗಿದೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೆಎಂಸಿ ಮಂಗಳೂರಿನ ಡೀನ್ ಡಾ. ಬಿ. ಉನ್ನಿಕೃಷ್ಣನ್ ಅವರು, “ಈ ಕಾನ್ಕ್ಲೇವ್ ಬಹುಶಿಸ್ತೀಯ ಸಹಯೋಗ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯ ಮೂಲಕ ಕ್ಯಾನ್ಸರ್ ಆರೈಕೆಯನ್ನು ಮುನ್ನಡೆಸುವ ನಮ್ಮ ಸಂಸ್ಥೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ” ಎಂದರು. 1992 ರಿಂದಲೂ ಮಂಗಳೂರು ನಗರದ ಮೊದಲ ಕ್ಯಾನ್ಸರ್ ಘಟಕವಾಗಿ ಕರ‍್ಯಾಚರಿಸುತ್ತಿರುವ ಕೆಎಂಸಿ ಆಸ್ಪತ್ರೆ ಅತ್ತಾವರದ ಹಿರಿಮೆಯನ್ನು ಅವರು ಸ್ಮರಿಸಿದರು. ಈ ಕೇಂದ್ರವು ರೇಡಿಯೇಶನ್ ಆಂಕೊಲಾಜಿ, ರ‍್ಜಿಕಲ್ ಆಂಕೊಲಾಜಿ, ಮೆಡಿಕಲ್ ಆಂಕೊಲಾಜಿ, ಕ್ಯಾನ್ಸರ್ ರೋಗನರ‍್ಣಯ ಮತ್ತು ತಪಾಸಣೆ ಹಾಗೂ ಪ್ಯಾಲಿಯೇಟಿವ್ ಕೇರ್ ಮೂಲಕ ಸಮಗ್ರ ಸೇವೆಗಳನ್ನು ಒದಗಿಸುತ್ತಿದೆ. ಇಲ್ಲಿ ಅತ್ಯಾಧುನಿಕ ‘ಟ್ರೂಬೀಮ್ ಲೀನಿಯರ್ ಆಕ್ಸಿಲರೇಟರ್’ (TrueBeam Linear Accelerator) ಉಪಕರಣವಿದ್ದು, ಇದು ಸ್ಟೀರಿಯೊಟಾಕ್ಟಿಕ್ ರೇಡಿಯೊಥೆರಪಿ ಮತ್ತು ಫೋರ್-ಡೈಮೆನ್ಷನಲ್ ಮೋಷನ್ ಮ್ಯಾನೇಜ್‌ಮೆಂಟ್ ಅಧಾರಿತ ರೇಡಿಯೇಶನ್ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗಿದೆ. ರ‍್ಕಾರಿ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೂ ಈ ಸುಧಾರಿತ ವ್ಯವಸ್ಥೆಗಳ ಮೂಲಕ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ಎಂದು ಅವರು ತಿಳಿಸಿದರು.
ಈ ಸಮ್ಮೇಳನವು ಸಂಘಟನಾ ಸಮಿತಿಯ ಅಧ್ಯಕ್ಷರಾದ ಡಾ. ಎಂ. ಎಸ್. ಅತಿಯಾಮಾನ್, ಕರ‍್ಯರ‍್ಶಿಗಳಾದ ಡಾ. ದಿಶಿತಾ ಶೆಟ್ಟಿ ಮತ್ತು ಡಾ. ಅಭಿಷೇಕ್ ಕೃಷ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಸಮ್ಮೇಳನದ ವಿಷಯವಾದ “ಉತ್ತಮ ಜಠರಗರುಳಿನ ಕ್ಯಾನ್ಸರ್ ಫಲಿತಾಂಶಗಳಿಗಾಗಿ ವಿವಿಧ ವಿಭಾಗಗಳ ಒಗ್ಗೂಡುವಿಕೆ” ಎಂಬುದು ರೋಗಿಗಳ ಗುಣಮುಖ ದರವನ್ನು ಹೆಚ್ಚಿಸಲು ಸಂಘಟಿತ ಬಹುಶಿಸ್ತೀಯ ವಿಧಾನಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ಈ ಸಮಾವೇಶದಲ್ಲಿ ಪ್ರಖ್ಯಾತ ಮೆಡಿಕಲ್, ರೇಡಿಯೇಶನ್ ಮತ್ತು ರ‍್ಜಿಕಲ್ ಆಂಕೊಲಾಜಿಸ್ಟ್‌ಗಳು, ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು, ಪೆಥಾಲಜಿಸ್ಟ್‌ಗಳು, ರೇಡಿಯಾಲಜಿಸ್ಟ್‌ಗಳು ಮತ್ತು ಇತರ ತಜ್ಞರು ಭಾಗವಹಿಸಲಿದ್ದಾರೆ. ವೈಜ್ಞಾನಿಕ ಕರ‍್ಯಕ್ರಮದಲ್ಲಿ ಉಪನ್ಯಾಸಗಳು, ಪ್ಯಾನಲ್ ರ‍್ಚೆಗಳು ಮತ್ತು ಪ್ರಕರಣ ಆಧಾರಿತ ಸಂವಾದಗಳು ನಡೆಯಲಿವೆ. ಈಗಾಗಲೇ 300 ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದು, ಇದು ಜಠರಗರುಳಿನ ಕ್ಯಾನ್ಸರ್ ಕ್ಷೇತ್ರದಲ್ಲಿ ಜ್ಞಾನ ವಿನಿಮಯಕ್ಕೆ ಪ್ರಮುಖ ವೇದಿಕೆಯಾಗಲಿದೆ.
ಜನವರಿ 31 ರಂದು ಬೆಳಿಗ್ಗೆ 10:00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಇದರ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಹೆ ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸೆಲರ್ ಡಾ. ದಿಲೀಪ್ ಜಿ. ನಾಯಕ್ ಅವರು ಕರ‍್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ. ಎಂ. ಚಕ್ರಪಾಣಿ ಅವರು ಮಾತನಾಡಿ, “ಪ್ರತಿ ರ‍್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಫೆಬ್ರವರಿ 1 ರಂದು ಬೆಳಿಗ್ಗೆ 6:00 ಗಂಟೆಗೆ ‘ಮಂಗಳೂರು ಕ್ಯಾನ್-ವಾಕ್’ ಜಾಗೃತಿ ನಡಿಗೆಯನ್ನು ಆಯೋಜಿಸಲಾಗಿದೆ” ಎಂದರು. ಈ ನಡಿಗೆಯಲ್ಲಿ ಕ್ಯಾನ್ಸರ್ ಗೆದ್ದವರು, ಆರೈಕೆದಾರರು, ವೈದ್ಯರು, ವಿದ್ಯರ‍್ಥಿಗಳು ಮತ್ತು ಸ್ವಯಂಸೇವಕರು ಸೇರಿದಂತೆ ಸುಮಾರು 1,300 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಕ್ಯಾನ್ಸರ್ ಬಗ್ಗೆ ಇರುವ ಕಳಂಕವನ್ನು ಕಡಿಮೆ ಮಾಡುವುದು, ಆರಂಭಿಕ ಪತ್ತೆಗೆ ಉತ್ತೇಜನ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ನಡಿಗೆಯ ಉದ್ದೇಶವಾಗಿದೆ. ನಡಿಗೆಯ ಹಾದಿ: ಡಾ. ಟಿ.ಎಂ.ಎ ಪೈ ಇಂರ‍್ನ್ಯಾಷನಲ್ ಕನ್ವೆನ್ಷನ್ ಸೆಂಟರ್ – ಪಿ.ವಿ.ಎಸ್ ಜಂಕ್ಷನ್ – ನವಭಾರತ್ ರ‍್ಕಲ್ – ಸಿಟಿ ಸೆಂಟರ್ – ಹಂಪನಕಟ್ಟೆ – ಕೆಎಂಸಿ ಲೈಟ್‌ಹೌಸ್ ಹಿಲ್ ರಸ್ತೆ ಕ್ಯಾಂಪಸ್ ವರೆಗೆ ಇರಲಿದೆ.
ಈ ಕರ‍್ಯಕ್ರಮಕ್ಕೆ ಮಂಗಳೂರು ರನ್ರ‍್ಸ್ ಕ್ಲಬ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಎಲ್ ಆಂಡ್ ಟಿ ಟೆಕ್ನಾಲಜಿ ರ‍್ವಿಸಸ್, ರೇಡಿಯೋ ಪರ‍್ಟ್ನರ್ – 93.5 ರೆಡ್ ಎಫ್‌ಎಂ, ದಿ ಓಷಿಯನ್ ರ‍್ಲ್, ಡೆಕಾಥ್ಲಾನ್ ಮತ್ತು ದಿ ಎಸ್ ಸ್ಟುಡಿಯೋ ಸಹಕಾರ ನೀಡಿವೆ.
