
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗದಲ್ಲಿ ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಮನುಷ್ಯರಾದ ನಾವು ಭೂಮಿಯನ್ನು ಅವಲಂಬಿಸಿದ್ದೇವೆ. ಹಾಗೆಯೇ ಭೂಮಿಯು ಸಹ ಮನುಷ್ಯ, ಪ್ರಾಣಿ ಪಕ್ಷಿ ಮತ್ತು ಮರ ಗಿಡಗಳನ್ನು ರಕ್ಷಿಸುತ್ತಿದೆ. ಆದುದರಿಂದ ವಿಶಾಲವಾದ ಭೂಮಿಯನ್ನು ನಾವೆಲ್ಲರೂ ಮುಂದಿನ ಪೀಳಿಗೆಗೆ ಯಾವುದೇ ಹಾನಿಯಾಗದಂತೆ ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಮತ್ತು ನಾವೆಲ್ಲರೂ ಗುಣಮಟ್ಟದ ಮತ್ತು ಮೌಲ್ಯಯುತ ಜೀವನಕ್ಕಾಗಿ ಭೂಮಿ, ನೀರು ಹಾಗೂ ಇನ್ನಿತರ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದನ್ನು ಅರಿತುಕೊಳ್ಳಬೇಕು ಎನ್ನುತ್ತಾ ವಿಶ್ವ ಭೂಮಿ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ನಂತರ ವಿಭಾಗದ ಆವರಣದಲ್ಲಿ ತೆಂಗಿನ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ಗುರುರಾಜ್ ಪಿ, ರಶ್ಮಿತಾ ಆರ್. ಕೋಟ್ಯಾನ್, ವೈಶಾಲಿ ಕೆ, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್, ವಾಣಿಜ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಕಾರ್ತಿಕ್ ಎಸ್, ನಿರ್ಮಲ ಬಿ, ಸುದೀಪ್ ಎಚ್.ಆರ್, ಕಾವ್ಯ ಎಚ್. ಎಸ್, ಮಹಮ್ಮದ್ ಫಾರಿಸ್, ಸಾರ್ಥಕ್ ಟಿ. ಮತ್ತು ಅಚ್ಚಯ್ಯ ಡಿ.ಪಿ. ಹಾಗೂ ಕಚೇರಿ ಸಿಬ್ಬಂದಿಗಳಾದ ಪ್ರಿಯಾ, ಸಂಜಯ್ ಮತ್ತು ಪೂರ್ಣಿಮಾ ಹಾಗೂ ಎಂ.ಕಾಂ.ಮತ್ತು ಎಚ್. ಆರ್. ಡಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.