ವಿಶ್ವ ಕೊಂಕಣಿ ಕೇಂದ್ರ : ‘ಪ್ರಗತಿ, ಸ್ಪೂರ್ತಿ, ಹಾಗೂ ಉನ್ನತಿ -2026’

0
1

ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ : ಸಮಾರೋಪ ಸಮಾರಂಭ

ದಿ. 28-06-2026 ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ  ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ),  ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್  ಸಮುದಾಯದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ನಾಲ್ಕು ದಿನಗಳ ವಸತಿ ಸಹಿತ  ಚಟುವಟಿಕೆ ಆಧಾರಿತ ‘ಪ್ರಗತಿ ಸ್ಪೂರ್ತಿ ಮತ್ತು  ಉನ್ನತಿ” 2026’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. 

ವಿಶ್ವ ಕೊಂಕಣಿ ಕೇಂದ್ರದ  ಕೋಶಾಧಿಕಾರಿ ಬಿ ಆರ್ ಭಟ್ ಅವರು “ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ಉಪಯುಕ್ತ ವಾದಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಇದರ ಸದುಪಯೋಗ ಪಡೆದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೇರಿ, ಕೊಂಕಣಿ ಭಾಷೆ, ಸಂಸ್ಕೃತಿ ಮುಂದುವರಿಯಲು ಸಮಾಜಕ್ಕೆ ಉಪಯುಕ್ತವಾದಂತಹ ಸೇವೆಯನ್ನು ನೀಡಬೇಕು. ಹಾಗೆಯೇ ಆತ್ಮ ವಿಶ್ವಾಸ ಬೆಳೆಸಿ, ಕೌಶಲ್ಯತೆಯಿಂದ ಬಂದ ಅವಕಾಶಗಳನ್ನ ಉಪಯೋಗಿಸಿಕೊಂಡು ಹೆತ್ತವರಿಗೂ, ಶಿಕ್ಷಕರಿಗೂ ಹೆಮ್ಮೆ ಪಡುವಂತಾಗಬೇಕು ಎಂದು ಪ್ರೇರಣಾದಾಯಕ ಮಾತುಗಳಿಂದ ಶುಭ ಹಾರೈಸಿದರು.

ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ ಪೈ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, “ನಮ್ಮ ಕೊಂಕಣಿ ಭಾಷೆ, ನಮ್ಮ ಸಮಾಜ,  ನಮ್ಮ ಮಾತೃ ಭಾಷೆಯನ್ನು ಮರೆಯದೆ, ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಈಗಿನ ಕಾಲಕ್ಕೆ ಅತೀ ಅವಶ್ಯಕ” ಅದರ ಹಾಗೆಯೇ ಜೀವನದಲ್ಲಿ ಆರೋಗ್ಯದ ಕಾಳಜಿಯೂ ಅಗತ್ಯವಿದ್ದು, ಇತ್ತೀಚಿಗೆ ಯುವ ಜನರಲ್ಲಿ ಕಾಣಸಿಗುವ ಹೃದಯ ರೋಗದ ಬಗ್ಗೆ ಅರಿವು ಮೂಡಿಸುತ್ತಾ, ಇದನ್ನು ತಡೆಗಟ್ಟಲು ಏನೆಲ್ಲಾ ಕಾಳಜಿ ವಹಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು.

ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ ದೇವದಾಸ್ ಪೈ, ‘ಕೊಂಕಣಿ ಭಾಷೆ ಮತ್ತು ನಾವು’ ವಿಷಯದಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಮಕ್ಕಳಲ್ಲಿ ಭಾಷಾ ಸಾಹಿತ್ಯ ಹಾಗೂ ವ್ಯಾಕರಣ ಹೀಗೆ ಸೂಕ್ಷ್ಮ ವಿಚಾರಗಳನ್ನು ತಿಳಿಸುವುದರೊಂದಿಗೆ ಭಾಷಾ ಪ್ರೇಮವನ್ನು ಬೆಳೆಸುವಲ್ಲಿ ಯಶಸ್ವಿಯಾದರು.

ದಯಾನಂದ ಪ್ರಭು ಎಮ್ ಆರ್.ಪಿ.ಎಲ್ ಇವರು ‘ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ  ಕೌಶಲ್ಯ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಗೌರವಿಸುವ ಉದ್ದೇಶದಿಂದ ಕೂಡಿತ್ತು. ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದು ಹಿರಿಯರ ಮಾರ್ಗದರ್ಶನದಂತೆ  ಮುಂದಿನ ಸಮಾಜಕ್ಕೆ ಸೇವೆ ಸಲ್ಲಿಸಬೇಕು’, ಎಂದು ಹೇಳಿದರು.    

ಹಿರಿಯರಾದ ಜಯಂತ ನಾಯಕ್ ಮಾತಾಡುತ್ತಾ ‘ಶಿಕ್ಷಣದ ಜೊತೆಗೆ ಆರೋಗ್ಯವೂ ಪ್ರಮುಖವಾಗಿದ್ದು ಆರೋಗ್ಯ ಕಾಳಜಿಯ ಜೊತೆಗೆ ಪರಿಸರ ಕಾಳಜಿಯ ಸಮಯ ಪ್ರಜ್ನೆಗಳನ್ನು’ ತಿಳಿಸಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಕಾರ್ಯಾಗಾರದ ಶಿಸ್ತುಬದ್ಧ ಚಟುವಟಿಗಳನ್ನು  ಮತ್ತು  ತಮ್ಮ ಅನುಭವವನ್ನು ಹಂಚಿಕೊಂಡರು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. 

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ ರಮೇಶ ನಾಯಕ್ ಮೈರಾ,  ಪೂರ್ಣಾನಂದ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಪ್ರಭು ವಗ್ಗ, ವಿಶ್ವನಾಥ ಶೆಣೈ ಮರೋಳಿ, ರಾಮಕೃಷ್ಣ ಪ್ರಭು ಮಾರಿಬೆಟ್ಟು, ಗಣೇಶ್ ನಾಯಕ್ ಬೋಳಂಗಡಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ಅನಂತ್ ಪ್ರಭು ಮರೋಳಿ, ಮೋಹನ್ ನಾಯಕ್ ಒಡ್ಡೂರು,  ಸುಚಿತ್ರ ರಮೇಶ ನಾಯಕ್, ಉಪೇಂದ್ರ ನಾಯಕ್, ದಯಾನಂದ ನಾಯಕ್ ಮೈರ, ರಾಜೇಶ್ ನಾಯಕ್ ಬೋಳಂಗಡಿ, ಸುರೇಂದ್ರ ನಾಯಕ್ ನೂಜಿನಡ್ಕ, ಲಕ್ಷ್ಮೀ ಕಿಣಿ, ವಿಘ್ನೇಶ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಡಾ.ವಿಜಯಲಕ್ಷ್ಮಿ ನಾಯಕ್ ಅವರು  ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಪ್ರಶಾಂತ್ ನಾಯಕ್ ಸಿದ್ದಕಟ್ಟೆ, ಸ್ವಾತಿ ನಾಯಕ್ ಒಡ್ಡೂರು, ರಕ್ಷಾ ಪ್ರಭು ಓಮ, ಸುದೀಪ್ ಶೆಣೈ, ಸೌರೇಶ್ ಪಾಟೀಲ್ ಪರ್ಕಳ, ಮಧುಸೂದನ್, ಚೇತನ್ ಶೆಣೈ, ಅರ್ಚನಾ, ಮುಂತಾದವರನ್ನು ಪರಿಚಯಿಸಿದರು.        

ಶಿಭಿರಾಥಿ೯ಗಳಾದ ಹಿಮಾಂಶು ನಾಯಕ್ ವಂದಿಸಿ, ಪ್ರಶಾಂತ ಪ್ರಭು ಕಾರ್ಯಕ್ರಮವನ್ನು ನಿರೂಪಿಸಿದರು.ಸೌಜನ್ಯ ನಾಯಕ್ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here