ಸಾಹಿತಿ , ಸಂಘಟಕಿ , ಶೋಭಾ ದಿನೇಶ್ ಉದ್ಯಾವರ ಅವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026

0
85

ಶೋಭಾ ದಿನೇಶ್ ಉದ್ಯಾವರ – ಉಡುಪಿ ಉದ್ಯಾವರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ 26 ವರ್ಷಗಳಿಂದ ವೃತ್ತಿಯಲ್ಲಿದಾದಿಯಾಗಿ ಸೇವೆ ಸಲ್ಲಿಸುತ್ತಿದ್ದು , ಸಾಹಿತ್ಯವನ್ನು ಪ್ರವೃತ್ತಿಯಾಗಿ ಮೈಗೂಡಿಸಿಕೊಂಡು ಅನೇಕ ಕವನ ,ಕಥೆ ,ನಾಟಕ ಹಾಗೂ ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ನಾಟಕ, ಶಿಶುಗೀತೆ ,ಕಥನ ಕವನ ಹಾಗೂ ತುಳು ಕಾದಂಬರಿ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ಅರ್ಪಿಸಿರುತ್ತಾರೆ .ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಇವರು ಅನೇಕ ಗೌರವ ಸನ್ಮಾನ ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. “ಸಾಗರಿಕ” ಕವನ ಸಂಕಲನ “ಪಾರಿಜಾತ” ಕಥಾಸಂಕಲನ ಹಾಗೂ “ಬೆರಗು ಚುಕ್ಕಿ” ಶಿಶುಗೀತೆ ಹಾಗೂ ಕವನ ಕಥನ ಕೃತಿಗಳು ಲೋಕಾರ್ಪಣೆಗೊಂಡಿರುತ್ತದೆ ,ಇವರು ಕನ್ನಡ ಭವನ ಉಡುಪಿ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here