Tuesday, April 22, 2025
Homeಬೆಳ್ತಂಗಡಿಯಕ್ಷಗಾನ ಭಾಗವತ ಸತೀಶ್​ ಆಚಾರ್ಯ ಬೈಕ್​ ಅಪಘಾತ ದಲ್ಲಿ ನಿಧನ

ಯಕ್ಷಗಾನ ಭಾಗವತ ಸತೀಶ್​ ಆಚಾರ್ಯ ಬೈಕ್​ ಅಪಘಾತ ದಲ್ಲಿ ನಿಧನ

ಬೆ ಳ್ತಂಗಡಿ: ಮಾರ್ಚ್​ 31 ರಂದು ಸೋಮವಾರ ಮುಂಜಾನೆ 4 ಗಂಟೆ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಡಿಂಜೆಯಲ್ಲಿ ಬೈಕ್​ಗಳ ನಡುವೆ ತೀವೃ ಅಪಘಾತ ಸಂಭವಿಸಿದೆ. ಪರಿಣಾಮ ಅಪಘಾತದಲ್ಲಿ ಮಂಗಳಾದೇವಿ ಮೇಳದ ಭಾಗವತ ಸತೀಶ್​ ಆಚಾರ್ಯ (40) ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ ಅಣ್ಣಿ ಆಚಾರ್ಯ ಮತ್ತು ವಿನೋದ ಆಚಾರ್ಯ ದಂಪತಿ ಪುತ್ರ, ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಸತೀಶ್ ಆಚಾರ್ಯ ಅವರು ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಮುಗಿಸಿ ಮುಂಜಾನೆ 4 ಗಂಟೆಗೆ ತಮ್ಮ ಬೈಕ್‌ನಲ್ಲಿ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಕಿಲಾರ ಮಾರಿಗುಡಿ ಸಮೀಪದ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ತಿರುವು ರಸ್ತೆಯಲ್ಲಿ ಎದುರಿನಿಂದ ಬಂದಂತಹ ಬೈಕ್​ ಹಾಗೂ ಇವರು ಹೋಗುತ್ತಿದ್ದಂತಹ ಬೈಕ್​ ನಡುವೆ ಡಿಕ್ಕಿ ಉಂಟಾಗಿ ಈ ಅಪಘಾತ ಉಂಟಾಗಿದೆ. ಇನ್ನೂ ಬೈಕ್​ಗಳ ನಡುವೆ ಅಪಘಾತ ಉಂಟಾಗುತ್ತಿದ್ದಂತೆ ಮೃತ ಸತೀಶ್​ ಆಚಾರ್ಯ ಬೈಕ್​ನಿಂದ ರಸ್ತೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎದುರಿನಿಂದ ಬಂದಂತಹ ಬೈಕ್​ ಸವಾರನಿಗೂ ಗಾಯಗಳಾಗಿದ್ದು, ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ.

ಈ ಸಂಬಂಧ ವೇಣೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular