
ಹೆಬ್ರಿ : ಮಹಾಗಣಪತಿ ಚಿಕ್ಕಮೇಳ ಬಳಗ, ಚಾರ ಹೆಬ್ರಿ ಇವರ ಚಿಕ್ಕಮೇಳದ ತಿರುಗಾಟದ ಕೊನೆಯ ದಿನ, ತಂಡಕ್ಕೆ ಸದಾ ಪ್ರೀತಿಯಿಂದ ಸಹಕರಿಸುತ್ತಾ, ಯಕ್ಷಗಾನ ಕಲೆಯ ಮೇಲಿನ ಅಭಿಮಾನದಿಂದ ತಂಡದೊಂದಿಗೆ ನಿರಂತರವಾಗಿ ಇದ್ದ ಯಕ್ಷಾಭಿಮಾನಿ ರಾಘವೇಂದ್ರ ಶೆಟ್ಟಿ ಮಾಡಾಮಕ್ಕಿ ಅವರನ್ನು ಗೌರವಿಸಲಾಯಿತು.
ಚಿಕ್ಕಮೇಳದ ತಿರುಗಾಟದ ಸಂದರ್ಭದಲ್ಲಿ ತಂಡದೊಂದಿಗೆ ಸದಾ ಸಹಕಾರ ನೀಡಿದ ರಾಘವೇಂದ್ರ ಶೆಟ್ಟಿಯವರ ಸೇವೆ ಹಾಗೂ ಪ್ರೋತ್ಸಾಹವನ್ನು ಸ್ಮರಿಸಿ, ಬಳಗದ ವತಿಯಿಂದ ಗೌರವ ಸಲ್ಲಿಸಲಾಯಿತು. ಯಕ್ಷಗಾನ ಕಲೆಯ ಬೆಳವಣಿಗೆಗೆ ಕಲಾಭಿಮಾನಿಗಳ ಪ್ರೋತ್ಸಾಹ ಮತ್ತು ಸಹಕಾರ ಮಹತ್ವದ್ದಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಡಾಮಕ್ಕಿ ಮೇಳದ ಹಿರಿಯ ಭಾಗವತರಾದ ಜಂಬೂರು ಗೋಪಾಲ್ ನಾಯ್ಕ್, ಶರತ್ ಶೆಟ್ಟಿ ತೀರ್ಥಹಳ್ಳಿ, ಕುಮಾರಸ್ವಾಮಿ ಅರಳಸುರುಳಿ, ಗಣೇಶ್ ನಾಯಕ್, ಮೇಘರಾಜ್ ನಾಯ್ಕ್, ಸಂತೋಷ್ ಹಾಗೂ ಚಿಕ್ಕಮೇಳದ ಯಜಮಾನರಾದ ವಿಘ್ನೇಶ್ ನಾಯ್ಕ್ ಚಾರ ಉಪಸ್ಥಿತರಿದ್ದರು.
