ಯಕ್ಷಗಾನ ಶ್ರೀಕೃಷ್ಣದೇವರಾಯನ ಕಾಲದ್ದು 15 ನೇ ಶತಮಾನದ ಶಿಲಾಶಾಸನ ಬಳ್ಳಾರಿಯ ಕುರುಗೋಡಿನಲ್ಲಿ ಸಿಕ್ಕಿದೆ. ಸಾಕ್ಷ ಮದ್ರಾಸ ವಿಶ್ವವಿದ್ಯಾಲಯದಲ್ಲಿದೆ.
ಪಣಜಿ: ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಯಕ್ಷಗಾನವನ್ನು ನಾನು ವೀಕ್ಷಿಸಿದ್ದೇನೆ. ಈ ರಾಜ್ಯಗಳಲ್ಲಿ ಯಕ್ಷಗಾನ ಕಲೆ ಆರಾಧನಾ ಕಲೆಯಾಗಿದೆ. ಈ ಕಲೆಯು ಪ್ರಪಂಚದಾದ್ಯಂತ ಹೆಸರಿಸಿದೆ. ಈ ಪ್ರಾಚೀನ ಕಲೆಯನ್ನು ಹೊರ ರಾಜ್ಯ ಗೋವಾದಲ್ಲಿಯೂ ಮುಂದುವರಿಸಿಕೊಂಡು ಹೋಗುವ ಕಾರ್ಯವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಭಾರತ ಪ್ರವಾಸೋದ್ಯಮ ಮತ್ತು ಬಂದರುಗಳು. ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯ್ಕ ನುಡಿದರು. ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಗೋವಾ ವಿಧಾನಸಭೆ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್.ಧ್ರುವಕುಮಾರ್ ಮಾತನಾಡಿ, ಯಕ್ಷಗಾನ ಕಲೆ ಶ್ರೀ ಕೃಷ್ಣದೇವರಾಯರವರ ಕಾಲದಲ್ಲಿ ಇತ್ತು ಎಂಬ ದಾಖಲೆ 15 ನೇ ಶತಮಾನದ ಶಿಲಾಶಾಸನ ಬಳ್ಳಾರಿಯ ಕುರುಗೋಡಿನಲ್ಲಿ ಸಿಕ್ಕಿದೆ. ಇದರ ಸಾಕ್ತ ಮದ್ರಾಸ ವಿಶ್ವವಿದ್ಯಾಲಯದಲ್ಲಿದೆ ಎಂದರು.
ಮುಖ್ಯ ಅತಿಥಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ ಶೆಟ್ಟಿ ಪಟ್ಲ, ಯಕ್ಷದ್ರುವ ಪಟ್ಲ ಫೌಂಡೇಶನ್ ಯಕ್ಷಗಾನ, ನಾಟಕ ರಂಗಭೂಮಿ, ದೈವಾರಾಧನೆ, ಹಾಗೂ ಕಂಬಳ ಕ್ಷೇತ್ರದಲ್ಲಿ ದುಡಿಯುವಂತಹ ಎಲ್ಲ ಕಲಾವಿದರುಗಳಿಗೆ ಸುಮಾರು 15 ಕೋಟಿ ರೂ.ವರೆಗೆ ಬೇರೆ ಬೇರೆ ರೂಪದಲ್ಲಿ ಕಳೆದ 10 ವರ್ಷದಲ್ಲಿ ನೀಡಿದ್ದೇವೆ. ಯಕ್ಷಗಾನದ ಇತಿಹಾಸದಲ್ಲಿ ಇದು ಪ್ರಪ್ರಥಮ ಎಂದರು. ಗೌರದ ಉಪಸ್ಥಿತಿಯಿದ್ದ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರುರವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಉಪಸ್ಥಿತಿಯಾಗಿ ಸದಾನಂದ ಶೆಟ್ಟಿ ಬೆಳುವಾಯಿ, ಚಂದ್ರಹಾಸ ಅಮಿನ್ ಬಂಟ್ವಾಳ, ವಿಜಯೇಂದ್ರ ಶೆಟ್ಟಿ, ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣ ಕುಮಾರ್, ಸುನೀಲ್ ಶೆಟ್ಟಿ ಪಳ್ಳಿ, ಭರತ್ ಹೆಗ್ಡೆ, ಗೋವಾ ಬಂಟರ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ, ಗೋವಾ ನಾರಾಯಣ ಗುರು ಟ್ರಸ್ಟ್ ಅಧ್ಯಕ್ಷ ಪ್ರಕಾಶ ಪೂಜಾರಿ, ಮಲ್ಲಿಕಾರ್ಜುನ ಬದಾಮಿ, ಗೋವಾ ಯಕ್ಷಕಲಾ ಮಿತ್ರಕೂಟ ಅಧ್ಯಕ್ಷ ವಿನಾಯಕ ಅವಧಾನಿ, ಗೋವಾ ಜಿಲ್ಲವ ಸಂಘದ ಅಧ್ಯಕ್ಷ ನಾಗೇಶ್ ಪೂಜಾರಿ, ಶಶಿಧರ ನಾಯ್ಕ, ಗೋವಾ ಪ್ರಶಾಂತ ಜೈನ್ (ಸಿ.ಎ), ಆಶೋಕ ಶೆಟ್ಟಿ, ರಾಘವೇಂದ್ರ ಉಡುಪ, ಮೋಹನದಾಸ್ ಶೆಟ್ಟಿ, ಜಗದೀಶ ಶೆಟ್ಟಿ ಪಳ್ಳಿ, ಆನೀಲ್ ವಿ. ಪೂಜಾರಿ, ಗೋವಾ ತುಳು ಕೂಟದ ಉಪಾಧ್ಯಕ್ಷ ಶಶಿಧರ್ ರೈ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ರವರ ಸಾರಥ್ಯದಲ್ಲಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೈಜ ಪಾವಂಜೆರಿಂದ ದೇವಿ ಮಹಾತ್ಮ ಸಂಪೂರ್ಣ ಯಕ್ಷಗಾನ ಪ್ರದರ್ಶನ ನಡೆಯಿತು.