ಉಡುಪಿ : ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆ ಫೋನಿನಲ್ಲಿ ಮಾತನಾಡುತ್ತಾ ರೂಮಿನೊಳಗೆ ಹೋದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಂಜಿಬೆಟ್ಟು ನಿವಾಸಿ ರಂಜಿತ್ (28) ಮೃತರು. ಇವರು ಪೆಂಟಿಂಗ್ ಕೆಲಸವನ್ನು ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾಡಿ ನಂತರ ರೂಮಿನೊಳಗೆ ಹೋಗಿದ್ದಾರೆ.
ರಾತ್ರಿ 11 ಗಂಟೆಗೆ ಈತನ ತಂದೆ ರಾಜು ಮನೆಯ ವಾಟರ್ ಟ್ಯಾಂಕಿನ ನೀರು ತುಂಬಿ ಕೆಳಗೆ ಬೀಳುತ್ತಿದ್ದರಿಂದ ವಾಟರ್ ಟ್ಯಾಂಕಿನ ವಾಲ್ ಆಫ್ ಮಾಡಲು ಹೋದಾಗ ರಂಜಿತ್ ರೂಮಿನ ಕಿಟಕಿ ತೆರೆದಿದ್ದು, ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತ್ತು. ಕೂಡಲೇ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

