ಮೂಡುಮಾನಾ೯ಡಿನಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

0
9

ಮೂಡುಬಿದಿರೆ : ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನೋರ್ವ ತಮ್ಮ ದರ್ಖಾಸಿನಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಮಾನಾ೯ಡಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಪಡುಮಾರ್ನಾಡು ಗ್ರಾ. ಪಂಚಾಯತ್ ವ್ಯಾಪ್ತಿಯ ತಿರುಮಲಬೆಟ್ಟು ನಿವಾಸಿ ದಿ. ಮುತ್ತಯ್ಯ ಪೂಜಾರಿ ಅವರ ಪುತ್ರ ಅಗೋಟಿ ಯಾನೆ ರಮೇಶ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದ ರಮೇಶ್ ಅವರಿಗೆ ಪತ್ನಿ ಮತ್ತು ಎರಡೂವರೆ ವರ್ಷದ ಪುತ್ರಿ ಇದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here