ಯುವ ಅವರ ‘ಮೈ ಬಪ್ಪಾ ವರ್ಕ್‌ಶಾಪ್’ ಭಾರತದಾದ್ಯಂತ 80+ ಶಾಲೆಗಳಿಗೆ ತಂದಿದೆ ಸಂತಸ

0
171

ವಿಶೇಷವಾಗಿ ರೂಪಿಸಲ್ಪಟ್ಟ ಕಿಟ್‌ಗಳಿಂದ ವಿಶಿಷ್ಟವಾದ ಕಲಾವಸ್ತುಗಳನ್ನು ರೂಪಿಸಿ ಗಣೇಶ ಚತುರ್ಥಿ ಸಂಭ್ರಮವನ್ನು ಆಚರಿಸಿದ ವಿದ್ಯಾರ್ಥಿಗಳು

ಹುಬ್ಬಳ್ಳಿ: ಗಣೇಶ ಚತುರ್ಥಿಯ ಪವಿತ್ರ ಸಂದರ್ಭದ ಸಂಭ್ರಮಾಚರಣೆಗೆಂದು, ನವ್‌ನೀತ್ ಎಜುಕೇಶನ್ ಲಿಮಿಟೆಡ್‌ನ ಸ್ಟೇಶನರಿ ವರ್ಟಿಕಲ್ ಯುವ, ಭಾರತದಾದ್ಯಂತ ಸುಮಾರು 80 ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ‘ಮೈ ಬಪ್ಪಾ ವರ್ಕ್‌ಶಾಪ್’ ಆಯೋಜಿಸಿತ್ತು. ವಿದ್ಯಾರ್ಥಿಗಳೆಲ್ಲಾ ಒಟ್ಟಾಗಿ ಗಣೇಶನ ಆಚರಣೆಯ ಸ್ಮರಣಾರ್ಥವಾಗಿ, ಯುವ ಸ್ಟೇಶನರಿ ವಿಶೇಷವಾಗಿ ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ಸಂಗಮವಾಗಿ ಆಯೋಜಿಸಿದ ವಿಶೇಷ ಕಿಟ್‌ಗಳನ್ನು ಬಳಸಿ ವಿಶಿಶ್ಟ ಕಲಾವಸ್ತುಗಳನ್ನು ರೂಪಿಸಿದರು.ಯುವದ ವಾರ್ಷಿಕ ‘ಮೈ ಬಪ್ಪಾ ವರ್ಕ್‌ಶಾಪ್’, ಸೃಜನಶೀಲತೆ ಮತ್ತು ಕಲಿಕೆಯ ಮೂಲಕ ಗಣೇಶ ಚತುರ್ಥಿಯ ಚೇತನವನ್ನು ಜಾಗೃತವಾಗಿರುಸುತ್ತಲೇ ಬಂದಿದೆ. ಯುವ ದಲ್ಲಿ ಗಣೇಶನ ಹಬ್ಬ ಎಂದರೆ ಕೇವಲ ಹಬ್ಬ ಮಾತ್ರವಲ್ಲ, ಅದು ಮಕ್ಕಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸೃಜನಶೀಲತೆ, ಜ್ಞಾನ ಮತ್ತು ಸಹಬಾಳ್ವೆಗಳ ಸಂಭ್ರಮಾಚರಣೆ. ಈ ವರ್ಷ, ಈ ಉಪಕ್ರಮ ಮಹಾರಾಷ್ಟ್ರ, ದೆಹಲಿ, ಗುಜರಾತ್, ಕರ್ನಾಟಕ ಮತ್ತು ಇನ್ನೂ ಹಲವಾರು ಕಡೆ 80+ ಹೆಚ್ಚಿನ ಶಾಲೆಗಳ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಡಗರವನ್ನು ತುಂಬಿತು. ಹುಬ್ಬಳ್ಳಿಯಲ್ಲಿ ಯುವ, ಸೇಂಟ್ ಮೇರಿಸ್ ಹೈಸ್ಕೂಲ್, ಕೇಂದ್ರೀಯ ವಿದ್ಯಾಲಯ ನಂ 1, ಎಸ್‌ಬಿಐ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮತ್ತು ವಿಮಲಾ ಕುಲಕರ್ಣಿ ಮೆಮೋರಿಯಲ್ ಸೇರಿದಂತೆ ಹಲವು ಶಾಲೆಗಳಿಗೆ ಭೇಟಿ ಕೊಟ್ಟಿತು. ಸುಮಾರು 24,000 ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಈ ಸಂಭ್ರಮದಲ್ಲಿ ಭಾಗಿಯಾಗಿ, ಸುಂದರವಾದ ಕಲಾ ವಸ್ತುಗಳನ್ನು ನಿರ್ಮಿಸಿ ಗಣೇಶನಿಗೆ ನಮನಗಳನ್ನು ಸಲ್ಲಿಸಿದರು.

ಯವಾ ಸ್ಟೇಶನರಿಯ ಚೀಫ್ ಸ್ಟ್ರಾಟೆಜಿ ಆಧಿಕಾರಿ ಆಗಿರುವ ಶ್ರೀ ಅಭಿಜಿತ್ ಸನ್ಯಾಲ್ ಅವರು ಹೀಗೆ ಹೇಳುತ್ತಾರೆ, ‘ಯುವ ದಲ್ಲಿ ನಾವು ನಂಬುವುದೇನೆಂದರೆ, ಹಬ್ಬಗಳು ಕಲಿಕೆ, ಸಂತಸ ಮತ್ತು ಸಹಬಾಳ್ವೆಯ ಕ್ಷಣಗಳು. ಮೈ ಬಪ್ಪಾ ಸಂಭ್ರಮಾಚರಣೆ ನಮ್ಮದೇ ಆದ ವಿಧಾನದ ಮೂಲಕ ಮಕ್ಕಳಿಗೆ ಸೃಷ್ಟಿಸುವ, ಅಭಿವ್ಯಕ್ತಿಸುವ ಮತ್ತು ನಮ್ಮ ಸಂಸ್ಕೃತಿಯ ಮೌಲ್ಯಗಳೊಂದಿಗೆ ಜೊತೆಯಾಗುವುದಕ್ಕೆ ಸ್ಫೂರ್ತಿಯಾಗುವ ಸಾಧನಗಳನ್ನು ಒದಗಿಸುವ ಕ್ರಮ. ಅವರ ಉತ್ಸಾಹ ಮತ್ತು ಕಲಾಪ್ರತಿಭೆಗೆ ಸಾಕ್ಷಿಯಾಗುವುದು ನಾವೇನು ಮಾಡುತ್ತಿರುವೆವೋ ಅದಕ್ಕೆ ಮನೋವೈಜ್ಞಾನಿಕ ಕಾರಣವನ್ನು ಒದಗಿಸುತ್ತದೆ.‘ಮೈ ಬಪ್ಪಾ ವರ್ಕ್‌ಶಾಪ್’ ಎನ್ನುವುದು ಪುಟ್ಟಮನಸ್ಸುಗಳಲ್ಲಿ ಎಲ್ಲರೊಡನೆ ಕೂಡಿ ಆಚರಿಸುವ ಸಂಭ್ರಮಾಚರಣೆಗಳು, ಸಾಂಸ್ಕೃತಿಕ ಕೊಂಡಿ ಮತ್ತು ಸ್ವ ಅಭಿವ್ಯಕ್ತಿಯ ಚೇತನವನ್ನು ಪೋಷಿಸುವ ಒಪ್ಪಂದವಾಗಿದೆ. ಪ್ರತಿಯೊಂದು ಹಬ್ಬವೂ ಪ್ರತಿಯೊಂದು ಮಗುವಿನ ಕಲಿಕೆ ಮತ್ತು ಬೆಳವಣಿಗೆಗಳನ್ನು ಪೋಷಿಸುವ ಅರ್ಥಪೂರ್ಣ ಕ್ಷಣವಾಗುವಂತೆ ಯುವ ನೋಡಿಕೊಳ್ಳುತ್ತದೆ.

LEAVE A REPLY

Please enter your comment!
Please enter your name here