ಮೂಡುಬಿದಿರೆ: ಬೃಹತ್ ಉದ್ಯೋಗ ಮೇಳ -ಆಳ್ವಾಸ್ ಪ್ರಗತಿ 2025 ಆಗಸ್ಟ್ 1 ಹಾಗೂ 2 ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ. 2007 ರಲ್ಲಿ ಪ್ರಾರಂಭಗೊಂಡ ಕಾರ್ಯಕ್ರಮ 14 ವರ್ಷ ಪೂರೈಸಿದೆ. ಪ್ರತೀ ವರ್ಷ 200ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿ ಈ ತನಕ 36,151 ಮಂದಿ ಪ್ರತಿಷ್ಠೆಯ ಕಂಪೆನಿಗಳಲ್ಲಿ ಉದ್ಯೋಗ ಪಡೆದಿರುತ್ತಾರೆ.
15 ನೇ ವರ್ಷದಲ್ಲಿ ಈ ತನಕ 60 ಕಂಪೆನಿಗಳು ನೋಂದಾಯಿತ ಗೊಂಡಿದ್ದು ಇನ್ನೂ 130 ಕಂಪೆನಿಗಳು ಭಾಗವಹಿಸಲಿದ್ದಾರೆ. ಬ್ಯಾಂಕಿಂಗ್, ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ ಕೇರ್, ಫಾರ್ಮಾ, ಮಾರಾಟ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಎನ್ ಜಿ ಓ, ಕಂಪೆನಿಗಳು ಪದವಿ, ಸ್ನಾತಕೋತ್ತರ, ವೈದ್ಯಕೀಯ, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ಮ್ಯಾನೇಜ್ ಮೆಂಟ್, ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯು, ಎಸ್ ಎಸ್ ಎಲ್ ಸಿ, ಯ ಅರ್ಹ ಪ್ರತಿಭಾವಂತರಿಗೆ ಉದ್ಯೋಗಾವಕಾಶ ಒದಗಿಸಲಿದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ www.alvaspragathi.com ನಲ್ಲಿ ಉಚಿತ ಹಾಗೂ ಕಡ್ಡಾಯ ನೋಂದಣಿ ಮಾಡಿಕೊಳ್ಳ ಬೇಕಾಗುತ್ತದೆ. ಅಲ್ಲದೆ ಆಳ್ವಾಸ್ ಪರಿಣತ ತಂಡ ಮಾಹಿತಿ, ಸಂದರ್ಶನ ಕೌಶಲ್ಯ ತರಬೇತಿ ನೀಡುವುದು.
ಹೊರ ಜಿಲ್ಲೆಯ ಆಸಕ್ತ ಉದ್ಯೋಗಾಕಾಂಕ್ಷಿಗಳಿಗೆ ಜುಲೈ 31 ರಿಂದ ವಸತಿ, ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯ, ಕಲ್ಪಿಸಲಾಗುವುದು. ಅಭ್ಯರ್ಥಿಗಳು 5-10 ಪಾಸ್ಪೋರ್ಟ್ ಭಾವಚಿತ್ರ, ಸಂಪೂರ್ಣ ಶೈಕ್ಷಣಿಕ ವಿವರಣೆಯ 8-10 ಪ್ರತಿ, ಅಂಕಪಟ್ಟಿಗಳ ಝೆರಾಕ್ಸ್, ಆನ್ಲೈನ್ ನೋಂದಣಿ ನಂಬರ್, ಗಳೊಂದಿಗೆ ಆಗಸ್ಟ್ 1 ರಂದು ಬೆಳಗ್ಗೆ 8 ಗಂಟೆಗೆ ಆಳ್ವಾಸ್ ವಿದ್ಯಾಗಿರಿಯಲ್ಲಿ ಹಾಜರಾಗಲು ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ತರಬೇತಿ -ನೇಮಕಾತಿಯ ಮುಖ್ಯಸ್ಥೆ ರಂಜಿತಾ, ಪತ್ರಿಕೋದ್ಯಮದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.