ಅಕ್ಷಯ ಕಾಲೇಜಿನಲ್ಲಿ ಅಭಿಜ್ಞ ಎಜುಕೇಶನ್ನೊಂದಿಗೆ ಒಡಂಬಡಿಕೆ (MoU) ಹಾಗೂ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಡೇಟಾ ಅನಾಲಿಟಿಕ್ಸ್ ಕುರಿತು ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿ

0
13

ಪುತ್ತೂರು : ಅಕ್ಷಯ ಕಾಲೇಜಿನ ಬೈಟ್‌ಬ್ಲಿಟ್ಜ್ – ಐಟಿ ಕ್ಲಬ್ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕ (IQAC) ಸಂಯುಕ್ತ ಆಶ್ರಯದಲ್ಲಿ ಅಭಿಜ್ಞ ಎಜುಕೇಶನ್ ಸಹಯೋಗದೊಂದಿಗೆ ಒಡಂಬಡಿಕೆ (MoU) ಸಹಿ ಕಾರ್ಯಕ್ರಮ ಹಾಗೂ ಕೃತಕ ಬುದ್ಧಿಮತ್ತೆ (Artificial Intelligence – AI), ಸೈಬರ್ ಭದ್ರತೆ (Cyber Security) ಮತ್ತು ಡೇಟಾ ಅನಾಲಿಟಿಕ್ಸ್ (Data Analytics) ಕುರಿತ ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವಿದ್ಯಾರ್ಥಿಗಳನ್ನು ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ಸಜ್ಜುಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಶಶಾಂಕ್ ಶೆಟ್ಟಿ, ಸಹ ಪ್ರಾಧ್ಯಾಪಕರು, ಸಿಎಸ್ಇ ವಿಭಾಗ, ಎನ್‌ಎಂಎಎಂಐಟಿ (NMAMIT) ಹಾಗೂ ಸಹ-ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಇನ್ಸ್ಪಿರಾಂಟೆ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಡೇಟಾ ಅನಾಲಿಟಿಕ್ಸ್ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗಾವಕಾಶಗಳಿವೆ ಎಂದು ತಿಳಿಸಿದರು. ಕೇವಲ ಶೈಕ್ಷಣಿಕ ಜ್ಞಾನ ಸಾಕಾಗದೆ, ಪ್ರಾಯೋಗಿಕ ಅನುಭವ, ತಾಂತ್ರಿಕ ಕೌಶಲ್ಯ ಮತ್ತು ನಿರಂತರ ಕಲಿಕೆಯ ಮನೋಭಾವವೇ ಯಶಸ್ಸಿನ ಗುಟ್ಟು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಯಂತ ನಡುಬೈಲ್, ಅಧ್ಯಕ್ಷರು, ಅಕ್ಷಯ ಸಮೂಹ ಸಂಸ್ಥೆಗಳು, ಶಿಕ್ಷಣ ಮತ್ತು ಕೈಗಾರಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇಂತಹ ಒಡಂಬಡಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಈ ಸಹಭಾಗಿತ್ವದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ, ತಾಂತ್ರಿಕ ಪರಿಣತಿ ಹಾಗೂ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಭಿಜ್ಞ ಎಜುಕೇಶನ್ ಸಂಸ್ಥಾಪಕ ಹಾಗೂ ಮಾಲೀಕರಾದ ಅಭಿಲಾಷ್ ಕ್ಷತ್ರಿಯ ಮಾತನಾಡಿ, ಈ ಒಡಂಬಡಿಕೆಯಡಿ ವಿದ್ಯಾರ್ಥಿಗಳಿಗೆ AI, Cyber Security ಹಾಗೂ Data Analytics ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು ಎಂದರು. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಲೈವ್ ಇಂಡಸ್ಟ್ರಿ ಪ್ರಾಜೆಕ್ಟ್‌ಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು. ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ (Certificate) ಹಾಗೂ ಇಂಟರ್ನ್‌ಶಿಪ್ ಅವಕಾಶ ಒದಗಿಸಲಾಗುವುದು. ಇದರಿಂದ ವಿದ್ಯಾರ್ಥಿಗಳು ನೈಜ ಕೈಗಾರಿಕಾ ಅನುಭವ ಪಡೆದು ತಮ್ಮ ವೃತ್ತಿಜೀವನಕ್ಕೆ ಭದ್ರ ಅಡಿಪಾಯ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಹಾಗೂ ಬಿಸಿಎ ವಿಭಾಗದ ಮುಖ್ಯಸ್ಥೆ ದೀಕ್ಷಾ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮವು ಕು. ಲಾವಣ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಅಭಿಲಾಷ್ ಕ್ಷತ್ರಿಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯನ್ನು ದೀಕ್ಷಾ ರೈ ಪರಿಚಯಿಸಿದರು. ಕಾರ್ಯಕ್ರಮವನ್ನು

LEAVE A REPLY

Please enter your comment!
Please enter your name here