ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ 1 ನಿಮಿಷದ ಕೃಷ್ಣ ವಿಡಿಯೋ ಸ್ಪರ್ಧೆ

0
10

ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ವಿಶ್ವ ತುಳುವೆರ್ ಸಂಘಟನೆಯ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ 1 ನಿಮಿಷದ ಕೃಷ್ಣ ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಮಕ್ಕಳು ಶ್ರೀಕೃಷ್ಣನ ವೇಷಭೂಷಣ, ಅಭಿನಯ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಸೃಜನಾತ್ಮಕ ದೃಶ್ಯಗಳನ್ನು ಒಳಗೊಂಡ ಒಂದು ನಿಮಿಷದ ವಿಡಿಯೋವನ್ನು ಸಿದ್ಧಪಡಿಸಿ Instagram ಮೂಲಕ ಹಂಚಿಕೊಳ್ಳಬಹುದು. ಆಯ್ಕೆಯಾದ ಅತ್ಯುತ್ತಮ ವಿಡಿಯೋಗಳಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು.

ಇದರ ಜೊತೆಗೆ ಮುದ್ದು ಕೃಷ್ಣ ಸ್ಪರ್ಧೆ 6 ತಿಂಗಳಿನಿಂದ 3 ವರ್ಷದವರೆಗಿನ ಮಕ್ಕಳಿಗೆ ಹಾಗೂ ಪುಟಾಣಿ ಕೃಷ್ಣ ಸ್ಪರ್ಧೆ 3 ವರ್ಷದಿಂದ 10 ವರ್ಷದೊಳಗಿನ ಮಕ್ಕಳಿಗೆ ಆಯೋಜಿಸಲಾಗಿದೆ.

ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಲು ಸೆಪ್ಟೆಂಬರ್ 4, 2026 ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ 5, 2026 ರಂದು ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ವಿಜೇತರ ಆಯ್ಕೆ Instagram ಮೂಲಕದ ಪ್ರತಿಕ್ರಿಯೆ ಹಾಗೂ ಆಯ್ಕೆ ವಿಧಾನದ ಆಧಾರದ ಮೇಲೆ ನಡೆಯಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 9187005234 ಸಂಖ್ಯೆಯನ್ನು ಸಂಪರ್ಕಿಸಬಹುದು.

ಶ್ರೀಕೃಷ್ಣನ ಬಾಲಲೀಲೆ, ಭಕ್ತಿ ಮತ್ತು ಸೃಜನಶೀಲತೆಯನ್ನು ಮಕ್ಕಳ ಪ್ರತಿಭೆಯೊಂದಿಗೆ ಅನಾವರಣಗೊಳಿಸುವ ಈ ವಿಶೇಷ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.