ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕಾಂತಾಡಿ ಎಂಬಲ್ಲಿ 10 ಎಕ್ಕರೆಹಡಿಲು ಗದ್ದೆ ಬೇಸಾಯ

0
232

ರೋಟರಿ ಚಿತ್ತ ಬೇಸಾಯದತ್ತ ರೋಟರಿ ನಡಿಗೆ ಹಳ್ಳಿ ಕಡೆಗೆ
ಲೋ ರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಬಂಟ್ವಾಳ ಹಾಗೂ ಸಜೀಪ ದಸರಾ 2026 ಶತಮಾನೋತ್ಸವ ಸಮಿತಿ ಮತ್ತು ಸುಭಾಷ್ ಯುವಕ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಡಿಲು ಗದ್ದೆ ಬೇಸಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಭಾಸ್ ನಗರ ಸಜೀಪ ಮೂಡ ಶಾಲಾ ವಿದ್ಯಾರ್ಥಿಗಳಿಗೆ ಭತ್ತದಕೃಷಿ ಪ್ರಾತ್ಯಕ್ಷಿಕೆ ಚಾಲನೆ ನೀಡಲಾಯಿತು. ಸಜೀಪ ಮಾಗಣೆ ತಂತ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸಾವಯವ ಕೃಷಿ ಪದ್ಧತಿಯೊಂದಿಗೆ ಭತ್ತದ ಕೃಷಿ ಮಾಡಿದರೆ ನಮ್ಮ ಆರೋಗ್ಯ ಸುಧಾರಿಸುವುದು ಭತ್ತದ ಬೆಳೆಯಿಂದ ಪರಿಸರದ ಅಂತರ್ಜಾಲ ಹೆಚ್ಚಾಗಿ ನೀರಿನ ಸಮಸ್ಯೆ ಪರಿಹಾರವಾಗಲಿದೆ ಅಳಿವಿನ ಅಂಚಿನಲ್ಲಿರುವ ಭತ್ತದ ಕೃಷಿಯನ್ನು ಪುನರಾರಂಭಿಸಿರುವುದು ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡಿರುವುದು ರೋಟರಿಯ ಮಾದರಿ ಕೆಲಸ ಇಂತಹ ಹಡಿಲುಗದ್ದೆ ಬೇಸಾಯ ಉಳಿದವರಿಗು ಪ್ರೇರಣೆ ನೀಡುವಂತಾಗಲಿ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಪೆರ್ನಾಂಡಿಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ರೋಟರಿ ಸಮಾಜಮುಖಿಯಾಗಿ ಅಳಿವಿನ ಅಂಚಿನಲ್ಲಿರುವ ಭತ್ತದ ಬೇಸಾಯಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು ರೋಟರಿ ಕ್ಲಬ್ ಸ್ಥಾಪಕ ಅಧ್ಯಕ್ಷ ಕಂಬಳಕೋಣದ ಯಜಮಾನ ಅವಿಲ್ ಮೀನೇಜಸ್ ಕೃಷಿಕರು ಲಾಭ ನಷ್ಟವನ್ನು ಲೆಕ್ಕಿಸದೆ ಭತ್ತದ ಬೆಳೆಯನ್ನು ಬೆಳೆಯುವುದರ ಮೂಲಕ ಪಾರಂಪರಿಕ ಭತ್ತದ ಕೃಷಿ ಮುಂದಿನ ಪೀಳಿಗೆಗೆ ಆಹಾರ ಒದಗಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದರು ಕಾರ್ಯಕ್ರಮದ ರೂವಾರಿ ಸಜಿ ಪಮ್ಮೂಡ ಪಂಚಾಯತ್ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪುಂಜಾ, ಯುವಕ ಮಂಡಲದ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ , ಶಾರದಾ ಪೂಜೆ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಪಂಚಾಯಿತಿ ಸದಸ್ಯರಾದ ಯೋಗೀಶ್ ಬೆಳ್ಚಡ, ಕೆರಿ0.ಹಮೀದ್, ಸಿದ್ದಿಕ್, ಪಂಚಾಯತ್ ಪಿಡಿಒ ಮಾಯಾಕುಮಾರಿ, ಶಾಲಾ ಶಿಕ್ಷಕಿ ಜಸಿ0ತ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ದಕಟ್ಟೆ , ರಾಮಚಂದ್ರ ಶೆಟ್ಟಿಗಾರ್ ಅಣಳಿಕೆ, ಕಾರ್ಯದರ್ಶಿ ಮೋಹನ್ ಶ್ರೀಯಾನ್ ಕೆ. ರಾಯಿ. ಶಾಲಾ ವಿದ್ಯಾರ್ಥಿಗಳು ಯುವಕ ಮಂಡಲದ ಪದಾಧಿಕಾರಿಗಳು ಕೃಷಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here