16 ವರ್ಷದ ವಿದ್ಯಾರ್ಥಿ ಕಾಣೆ : ಸಾರ್ವಜನಿಕರಿಂದ ಮಾಹಿತಿ ನಿರೀಕ್ಷೆ

0
15

ಶಿವಮೊಗ್ಗ : ಕಾಲೇಜಿಗೆ ತೆರಳಿದ್ದ 16 ವರ್ಷದ ವಿದ್ಯಾರ್ಥಿಯೊಬ್ಬರು ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ನಾಪತ್ತೆಯಾದ ವಿದ್ಯಾರ್ಥಿಯನ್ನು ನಿರಂಜನ್ ಎನ್. (16) ಎಂದು ಗುರುತಿಸಲಾಗಿದೆ. ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾರಡುಕೆ ನಿವಾಸಿಯಾಗಿದ್ದು, ಶನಿವಾರ ಕಾಲೇಜಿಗೆ ತೆರಳಿದ ಬಳಿಕ ಮನೆಗೆ ಹಿಂದಿರುಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಾಪತ್ತೆಯಾಗುವ ವೇಳೆ ಅವರು ಕಪ್ಪು ಬಣ್ಣದ ಶರ್ಟ್ ಹಾಗೂ ಡಾರ್ಕ್ ಬಣ್ಣದ ಪ್ಯಾಂಟ್ ಧರಿಸಿದ್ದರು.

ವಿದ್ಯಾರ್ಥಿ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ 97419 91998 ಅಥವಾ 99725 15409 ಸಂಖ್ಯೆಗೆ ಸಂಪರ್ಕಿಸುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

“ನಿಮ್ಮ ಒಂದು ಮಾಹಿತಿ ಒಂದು ಕುಟುಂಬಕ್ಕೆ ದೊಡ್ಡ ಸಹಾಯವಾಗಬಹುದು. ದಯವಿಟ್ಟು ಈ ಮಾಹಿತಿಯನ್ನು ಹೆಚ್ಚಿನವರಿಗೆ ಹಂಚಿಕೊಳ್ಳಿ” ಎಂದು ಕುಟುಂಬಸ್ಥರು ವಿನಂತಿಸಿದ್ದಾರೆ.