ರಸ್ತೆಯಲ್ಲಿ ನೀರು, ಮುಗಿಯದ ಗೋಳು : ಬಸ್ ಕಾಯುವ ಪ್ರಯಾಣಿಕರ ಪರದಾಟ

0
10

ಬಂಟ್ವಾಳ : ಇಲ್ಲಿನ ಬಿ.ಸಿ.ರೋಡು ಖಾಸಗಿ ಬಸ್ ನಿಲ್ದಾಣ ಎದುರು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಒಂದು ಪಾಶ್ರ್ವದಲ್ಲಿ ಸವರ್ಿಸ್ ರಸ್ತೆಯುದ್ದಕ್ಕೂ ಸೋಮವಾರ ಸಂಜೆ ಮಳೆನೀರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆ ದಾಟಲು ಕೆಲಹೊತ್ತು ಪರದಾಡುವ ದೃಶ್ಯ ಕಂಡು ಬಂದಿದೆ.

ಸೋಮವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಇಲ್ಲಿನ ಸವರ್ಿಸ್ ರಸ್ತೆ ಬದಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿಯೂ ಇಲ್ಲ. ಇದರಿಂದಾಗಿ ಕಳೆದ ಏಳೆಂಟು ವರ್ಷಗಳಿಂದ ಈ ಸಮಸ್ಯೆ ಮಳೆಗಾಲದಲ್ಲಿ ನಿರಂತರವಾಗಿದೆ. ಈ ಬಗ್ಗೆ ಹಲವು ಬಾರಿ ವಿವಿಧ ಪತ್ರಿಕೆ ಮತ್ತಿತರ ಮಾಧ್ಯಮಗಳು ಗಮನ ಸೆಳೆಯುತ್ತಲೇ ಇದೆ. ಆದರೆ ಈ ಬಗ್ಗೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಗಮನ ಹರಿಸದೆ ಮೌನ ನಿಲರ್ಿಪ್ತ ಧೋರಣೆಯಿಂದ ನಮಗೆ ಸಂಬಂಧವೇ ಇಲ್ಲ ಎಂಬಂತೆ ವತರ್ಿಸುತ್ತಿದ್ದಾರೆ ಎಂದು ಆಕ್ರೋಶ ಭರಿತ ಆರೋಪ ನಾಗರಿಕರಿಂದ ವ್ಯಕ್ತವಾಗಿದೆ.

ಇದೇ ರಸ್ತೆಯಲ್ಲಿ ಮಂಗಳೂರು ಮತ್ತು ಪೊಳಲಿ-ಕೈಕಂಬ ಕಡೆಗೆ ಸಾಗುವ ಖಾಸಗಿ ಮತ್ತು ಸಕರ್ಾರಿ ಬಸ್ ನಿಲುಗಡೆಯಿದ್ದು, ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ನಿಮರ್ಾಣಗೊಂಡ ಬಸ್ ಶೆಲ್ಟರ್ ಕೂಡಾ ಇದೆ. ಆದರೆ ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಈ ಕೃತಕ ಕೆರೆ ದಾಟಲು ಪ್ರಯಾಣಿಕರು ಹರಸಾಹಸ ಪಡುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.