ಮಂಗಳೂರು :ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ 16ನೇ ಕಾಲೇಜು ದಿನಾಚರಣೆಯನ್ನು ಮಂಗಳವಾರ ಮಿಲಾಗ್ರಿಸ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕರ‍್ಯಕ್ರಮದ ಮುಖ್ಯ ಅತಿಥಿಯಾದ ಫಾದರ್ ಮುಲ್ರ‍್ಸ್ ಅಲಾಯ್ಡ್ ಹೆಲ್ತ್ ಸೈನ್ಸ್ ವಿಭಾಗದ ಆಡಳಿತಾಧಿಕಾರಿಯಾದ ರೆವ್. ಡಾ. ಮೈಕಲ್ ಸಾಂತುಮಯೋರ್ ಅವರು ಮಾತನಾಡಿ, ವಿದ್ಯರ‍್ಥಿಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.

ಕಾಲೇಜು ಜೀವನವು ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ವಿದ್ಯರ‍್ಥಿಯೂ ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಕರೆ ನೀಡಿದರು. ಇಂದಿನ ಸ್ರ‍್ಧಾತ್ಮಕ ಯುಗದಲ್ಲಿ ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು ಎಂದು ತಿಳಿಸಿದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕರಾದ ರೆವ್. ಫಾ. ಬೊನವೆಂಚರ್ ನಜರತ್ ಮಾತನಾಡಿ, ಮಿಲಾಗ್ರಿಸ್ ಕಾಲೇಜು ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಾಮಾಜಿಕ ಬದ್ಧತೆಯನ್ನು ವಿದ್ಯರ‍್ಥಿಗಳಲ್ಲಿ ಬೆಳೆಸುತ್ತಿದೆ ಎಂದು ಹೇಳಿದರು. ವಿದ್ಯರ‍್ಥಿಗಳು ಕಾಲೇಜಿನ ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಆಶಿಸಿದರು. ಕಾಲೇಜಿನ ಪ್ರಗತಿಗೆ ಶ್ರಮಿಸುತ್ತಿರುವ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯರ‍್ಥಿಗಳನ್ನು ಅಭಿನಂದಿಸಿದರು.

ಮೂರು ತಿಂಗಳ ಎನ್ಸಿಸಿ ಅಧಿಕಾರಿ ತರಬೇತಿ ಮುಗಿಸಿದ್ದ ಉಪನ್ಯಾಸಕರಾದ ಲೆಫ್ಟಿನೆಂಟ್ ಡೆನ್ಸಿಲ್ಎಡ್ರೂಡ್ ಪಿಂಟೋ ಹಾಗೂ ರೇಂರ‍್ಸ್ ಅಂಡ್ ರೋವರ್ ತರಬೇತಿ ಮುಗಿಸಿದ್ದ ಲೆನಿಷಾ ಪೆರಿಸ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಹಿಂದಿ ವಿಭಾಗದ ಪ್ರಾಧ್ಯಾಪಕರಾದ ಶ್ರಾವ್ಯ ಎನ್ ಹಾಗೂ ಅತ್ಯುತ್ತಮ ಸಹಾಯಕ ಸಿಬ್ಬಂದಿ ಪ್ರಶಸ್ತಿಯನ್ನು ಲವಿತ ನಿಶಾಲ್ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ‍್ಭದಲ್ಲಿ ಕಾಲೇಜಿನ ವರ‍್ಷಿಕ ಸಂಚಿಕೆ ಮಿಲಾಗ್ರಿಸ್ ಮಿರಾಕಲ್ ಹಾಗೂ ವಾಣಿಜ್ಯ ವಿಭಾಗದ ಸಂಶೋಧನಾ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವರ‍್ಷಿಕ ಸಂಚಿಕೆಯ ಸಂಪಾದಕರಾದ ಮಂಜುಷಾ ಹಾಗೂ ಸಂಶೋಧನಾ ಗ್ರಂಥದ ಸಂಪಾಕರಾದ ಡಾ.ಆಶಾಜ್ಯೋತಿ ಉಪಸ್ಥಿತರಿದ್ದರು. ಸಂಶೋಧನಾ ಪ್ರಬಂಧ ಮಂಡಿಸಿದ ಉಪನ್ಯಾಸಕರಿಗೆ ಇದೆ ಸಂರ‍್ಭದಲ್ಲಿ ಗೌರವಿಸಲಾಯಿತು. ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕರ‍್ಯಕ್ರಮದಲ್ಲಿ ಪ್ಯಾರಿಷ್ ಪಾಸ್ಟೋರಲ್ ನ ಉಪಾಧ್ಯಕ್ಷರಾದ ಡಿಕ್ಸನ್, ಕರ‍್ಯರ‍್ಶಿ ಜೆಸಿಂತಾ, ಪಿಟಿಎ ಉಪಾಧ್ಯಕ್ಷರಾದ ಪ್ರಿಯರ‍್ಶಿನಿ, ವಿದ್ಯಾರ‍್ಥಿ ಸಂಘದ ಅಧ್ಯಕ್ಷೆ ಪ್ರೇಕ್ಷಿಕ ಡಿ ಆರ್, ಉಪಾಧ್ಯಕ್ಷ ರೋಹನ್, ಸಾಂಸ್ಕೃತಿಕ ಸಂಘದ ಕರ‍್ಯರ‍್ಶಿ ಜಯರಶ್ಮಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ರೆವ್. ಡಾ. ಆಲ್ವಿನ್ ಸೆರಾವೊ ಸ್ವಾಗತಿಸಿದರು. ಕರ‍್ಯಕ್ರಮ ಸಂಯೋಜಕಿ ಸಮಿತಾ ವಂದಿಸಿದರು. ವಿದ್ಯರ‍್ಥಿ ನಿಕೆಲ್ ಲಾನ್ಸ್ ಲೆವಿಸ್ ನಿರೂಪಿಸಿದರು. ಕಾರ‍್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಪ್ರರ‍್ಶನ ನಡೆದವು.

