ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವಕ್ಕೆ 2೦ ಸಾವಿರ ಭಕ್ತರ ಉಪಸ್ಥಿತಿ !

0
302

ಹಿಂದೂ ರಾಷ್ಟ್ರದ ಸ್ಥಾಪನೆ ಸಮಷ್ಟಿ ಸಾಧನೆಯೇ ಆಗಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – “ಸ್ವತಃ ಸಾಧನೆ ಮಾಡುವುದು ವ್ಯಷ್ಟಿ ಸಾಧನೆ, ಆದರೆ ಸಮಾಜವನ್ನು ಸಾಧನೆಯಲ್ಲಿ ತೊಡಗಿಸುವುದು ಸಮಷ್ಟಿ ಸಾಧನೆ. ಸನಾತನ ಸಂಸ್ಥೆಯು ಸಮಷ್ಟಿ ಸಾಧನೆಯನ್ನು ಕಲಿಸುತ್ತದೆ. ಅದಕ್ಕಾಗಿಯೇ ಇಂದು ಸನಾತನದ 131 ಸಾಧಕರು ಸಂತ ಪದವಿಯನ್ನು ಅಲಂಕರಿಸಿದ್ದಾರೆ ಮತ್ತು 1 ಸಾವಿರ ಸಾಧಕರು ಮುಂದಿನ 1೦ ವರ್ಷಗಳಲ್ಲಿ ಸಂತರಾಗಲಿದ್ದಾರೆ! ಸಮಾಜವೆಲ್ಲವೂ ಸಾತ್ವಿಕವಾದರೆ, ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರದಲ್ಲೇ ಆಗುತ್ತದೆ. ಹಿಂದೂ ರಾಷ್ಟ್ರದ ಸ್ಥಾಪನೆ ಸಮಷ್ಟಿ ಸಾಧನೆಯಾಗಿದೆ, ಅದಕ್ಕಾಗಿ ಎಲ್ಲರೂ ಸಾಧನೆ ಮಾಡಬೇಕು ಎಂದು ಹೇಳಲು ಸಮಾಜಕ್ಕೆ ಹೋಗಬೇಕು,” ಎಂದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರು ಮಾರ್ಗದರ್ಶನ ಮಾಡಿದರು. ಅವರು ಗೋವಾ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ 2೦ ಸಾವಿರಕ್ಕೂ ಹೆಚ್ಚು ಸಾಧಕರು ಮತ್ತು ಹಿಂದೂಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಪತ್ನಿ ಡಾ. (ಸೌ.) ಕುಂದಾ ಜಯಂತ ಆಠವಲೆ ಅವರ ವಂದನೀಯ ಉಪಸ್ಥಿತಿ ಇತ್ತು.

ಸಮಾಜದಲ್ಲಿ ಹೆಚ್ಚೆಚ್ಚು ಜನರು ಸಾತ್ವಿಕ ಮನೋಭಾವದವರಾದರೆ ಹಿಂದೂ ರಾಷ್ಟ್ರ ಖಚಿತ !

ಸಮಾಜದ ವೈದ್ಯರು ಕೇವಲ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಔಷಧ ನೀಡುತ್ತಾರೆ; ಆದರೆ ದುಷ್ಟ ಶಕ್ತಿಗಳ ತೊಂದರೆ ಸೇರಿದಂತೆ ಅನೇಕ ರೋಗಗಳು ಸ್ವಭಾವದೋಷ, ಪ್ರಾರಬ್ಧ, ಪೂರ್ವಜರ ತೊಂದರೆಗಳಿಂದ ಉಂಟಾಗುತ್ತವೆ. ಇದು ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಈ ತೊಂದರೆಗಳಿಗೆ ಅವರಲ್ಲಿ ಯಾವುದೇ ಪರಿಹಾರಗಳಿಲ್ಲ. ಪರಿಣಾಮವಾಗಿ, ದುಷ್ಟ ಶಕ್ತಿಗಳ ತೊಂದರೆಯನ್ನು ನಿವಾರಿಸಲು ನಾಮಜಪ ಅಂದರೆ ಸಾಧನೆಯನ್ನು ಮಾಡಬೇಕು. ‘ಹಿಂದೂ’ ಎಂಬ ಪದದ ಅರ್ಥ ‘ಹಿನಾನಿ ಗುಣಾನಿ ದುಷಯತಿ ಇತಿ ಹಿಂದೂ’ ಅಂದರೆ ತನ್ನಲ್ಲಿರುವ ದೋಷಗಳನ್ನು ದೂರ ಮಾಡುತ್ತಾನೆ, ಅವನೇ ಹಿಂದೂ. ಸಮಾಜದಲ್ಲಿ ಹೆಚ್ಚೆಚ್ಚು ಜನರು ಸಾತ್ವಿಕ ಮನೋಭಾವದವರಾದರೆ, ಹಿಂದೂ ರಾಷ್ಟ್ರ ಖಚಿತವಾಗಿ ಬರುತ್ತದೆ. ಈಗ ಆಪತ್ಕಾಲ, ಮೂರನೇ ಮಹಾಯುದ್ಧ ಸಂಭವಿಸಲಿದೆ, ಇದಕ್ಕಾಗಿ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಆಪತ್ಕಾಲದಲ್ಲಿ ಉಂಟಾಗುವ ಯುದ್ಧದಂತಹ ಪರಿಸ್ಥಿತಿಯಲ್ಲಿ ನಾಗರಿಕರು ವಿವಿಧ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ನಾವು ಅವರಿಗೆ ಸಹಾಯ ಮಾಡಬೇಕಾಗುತ್ತದೆ. ಅದಕ್ಕೆ ನಾವು ಈಗಿನಿಂದಲೇ ತಯಾರಿ ನಡೆಸಬೇಕು. ಈ ಸಿದ್ಧತೆಯೇ ಸಮಷ್ಟಿ ಸಾಧನೆ. ಸನಾತನ ರಾಷ್ಟ್ರದ ಸ್ಥಾಪನೆಯೇ ಹಿಂದೂ ರಾಷ್ಟ್ರದ ಸ್ಥಾಪನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ‘ಅನಂತಕೋಟಿ ಬ್ರಹ್ಮಾಂಡನಾಯಕ ರಾಜಾಧಿರಾಜ……ಶ್ರೀ ಗುರುಕೃಪಾಧಿಪತಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಜಿ ಕಿ ಜೈ’ ಎಂಬ ವಿಸ್ತೃತ ಬಿರುದಾವಳಿಯನ್ನು ವಾಚಿಸಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಹಿರಿಯ ಸಹೋದರ ಪೂ. ಅನಂತ ಆಠವಲೆ ಅವರು ತಮ್ಮ ಸಂದೇಶದಲ್ಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಜನ್ಮದಿನದ ನಿಮಿತ್ತ ಎಲ್ಲಾ ಸಂಕಲ್ಪಗಳು, ವಿಶೇಷವಾಗಿ ಧರ್ಮ ಸಂಸ್ಥಾಪನೆ ಮತ್ತು ಸನಾತನ ರಾಷ್ಟ್ರ ಸ್ಥಾಪನೆಯ ಸಂಕಲ್ಪಗಳು ಸಿದ್ಧಿಸಲಿ ಎಂದು ಹಾರೈಸಿದರು. ಹಾಗೆಯೇ ಪೂ. (ಡಾ.) ಕುಂದಾ ಆಠವಲೆ ಅವರು, ಸನಾತನದ ಕಾರ್ಯಕ್ಕೆ ದೊರೆಯುತ್ತಿರುವ ಈ ಕೀರ್ತಿ ನಮ್ಮ ಗುರು ಪ.ಪೂ. ಭಕ್ತರಾಜ ಮಹಾರಾಜರ ಕೃಪೆಯ ಫಲವೇ ಆಗಿದೆ ಎಂದು ಹೇಳಿದರು.

ವಿವಿಧ ಸಂಪ್ರದಾಯಗಳು, ಸಂತರು ಮತ್ತು ಗಣ್ಯರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಸನ್ಮಾನ !

ಇಂದೋರ್‌ನ ‘ಶ್ರೀ ಸದ್ಗುರು ಅನಂತಾನಂದ ಸಾಯಿಶ್ ಶೈಕ್ಷಣಿಕ ಏವಂ ಪಾರಮಾರ್ಥಿಕ ಟ್ರಸ್ಟ್’ನಿಂದ ಟ್ರಸ್ಟಿ ಶ್ರೀ. ಗಿರೀಶ್ ದೀಕ್ಷಿತ್, ಹಾಗೂ ಇತರ ಪದಾಧಿಕಾರಿಗಳು ಮತ್ತು ಪ.ಪೂ. ರಾಮಾನಂದ ಮಹಾರಾಜರ ಸೊಸೆ ಸೌ. ಶಿಲ್ಪಾ ನಿರಗುಡ್ಕರ್ ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಅವರ ಪತ್ನಿ ಪೂ. (ಡಾ.) ಸೌ. ಕುಂದಾ ಆಠವಲೆ ಅವರನ್ನು ವಿಶೇಷವಾಗಿ ಸನ್ಮಾನಿಸಿದರು, ಹಾಗೂ ಸಂತ ಭಕ್ತರಾಜ ಮಹಾರಾಜ ಮತ್ತು ಪ.ಪೂ. ಅನಂತಾನಂದ ಸಾಯಿಶ್ ಅವರ ಭಾವಚಿತ್ರವಿರುವ ಬೆಳ್ಳಿಯ ನಾಣ್ಯವನ್ನು ಈ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ‘ಅಂತರ್ಯೋಗ ಫೌಂಡೇಶನ್’ನ ಅಧ್ಯಕ್ಷ ಆಚಾರ್ಯ ಉಪೇಂದ್ರಜಿ ಮತ್ತು ಸೌ. ನೀತಾ, ಹಾಗೂ ಭಾಗ್ಯನಗರದ ‘ತಿರುಮಲ ತಿರುಪಮ್ ಕಂಪನಿ’ಯ ಸಂಸ್ಥಾಪಕ ಶ್ರೀ. ನಂಗುನೇರಿ ಚಂದ್ರಶೇಖರ್ ಅವರು ಸಹ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರನ್ನು ಸನ್ಮಾನಿಸಿದರು.

LEAVE A REPLY

Please enter your comment!
Please enter your name here