ಬಸ್ ನದಿಗೆ ಉರುಳಿ 23 ಪ್ರಯಾಣಿಕರು ಮೃತ್ಯು

0
121

ಢಾಕಾ : ಬಾಂಗ್ಲಾದೇಶದಲ್ಲಿ (Bangladesh) ಭೀಕರ ಅಪಘಾತ ನಡೆದಿದೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪದ್ಮಾ ನದಿಗೆಉರುಳಿ ಬಿದ್ದಿದ್ದು, ಅಪಘಾತದಲ್ಲಿ 23 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.

ರಾಜ್‌ಬರಿ ಜಿಲ್ಲೆಯ ನೈಋತ್ಯ ಭಾಗದಲ್ಲಿರುವ ದೌಲಾಡಿಯಾ ಟರ್ಮಿನಲ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಬುಧವಾರ ಸ್ಥಳೀಯ ಸಮಯ ಸಂಜೆ 5:51 ಕ್ಕೆ ಅಪಘಾತ ನಡೆದಿದೆ.ಅಪಘಾತದ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ರಂಜಾನ್ ಹಬ್ಬ ಮುಗಿದ ನಂತರ ಪ್ರಯಾಣಿಕರು ಢಾಕಾಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್‌ನೊಳಗೆ ಸಿಲುಕಿ ಬಿದ್ದಿದ್ದ 14 ಶವಗಳು ದೊರೆತಿವೆ ಎಂದು ಅವರು ಹೇಳಿದರು. ಅಗ್ನಿಶಾಮಕ ಮತ್ತು ಕರಾವಳಿ ಕಾವಲು ಸಿಬ್ಬಂದಿ, ಮಿಲಿಟರಿ ಮತ್ತು ಪೊಲೀಸರ ಸಹಾಯದಿಂದ ಕಾಣೆಯಾದವರನ್ನು ಹುಡುಕುತ್ತಿದ್ದಾರೆ ಎಂದು ಅವರು ಹೇಳಿದರು.ಅಪಘಾತದ ಸಮಯದಲ್ಲಿ ಬಸ್‌ನಲ್ಲಿ 40 ಪ್ರಯಾಣಿಕರು ಇದ್ದರು ಎಂದು ಎನ್ನಲಾಗಿದೆ. ಅವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here