ಶಿರಹಟ್ಟಿಯಲ್ಲಿ ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ ಗದಗ ಜಿಲ್ಲಾ ಘಟಕದ ವತಿಯಿಂದ ಸಾಧಕರ ಸನ್ಮಾನ ಕಾರ್ಯಕ್ರಮ ಯಶಸ್ವಿ

0
28

ಶಿರಹಟ್ಟಿಯ ಫಕೀರೇಶ್ವರ ನಗರದ ಎಚ್ ಎಂ ದೇವಗಿರಿ ಅವರ ನಿವಾಸದಲ್ಲಿ ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ ( ರಿ)ಗದಗ ಜಿಲ್ಲಾ ಘಟಕದ ವತಿಯಿಂದ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಭವನ ,ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ‌.ಸಂಗಮೇಶ ತಮ್ಮನಗೌಡ್ರ ವಹಿಸಿದ್ದರು.ಶಿಕ್ಷಕಿಯವರಾದ ರತ್ನಾ ಗಿರೋಸಾ ಬದಿ ಅವರ ಶೈಕ್ಷಣಿಕ , ಸಂಘಟನಾತ್ಮಕ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವರಲ್ಲ ದೇ ಬೋಧನೆ ಮತ್ತು ಬೇಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವಲ್ಲಿ ಹಿರಿಗುಣ ತೋರಿದ್ದಾರೆ‌.

ಎಚ್.ಎಂ.ದೇವಗಿರಿ ಅವರು ನಿವೃತ್ತ ಶಿಕ್ಷಕರಾಗಿದ್ದು ಶಿರಹಟ್ಟಿ ತಾಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದು, ವಿವಿಧ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವರು.ಹೀಗಾಗಿ ಇಬ್ಬರೂ ಅತಿಥಿಗಳನ್ನು ಕಾಸರಗೋಡಿನಕನ್ನಡ ಭವನ ಗ್ರಂಥಾಲಯ( ರಿ)ಗದಗ ಜಿಲ್ಲಾ ಘಟಕದ ಅಧ್ಯಕ್ಷ ಡಾ‌‌.ಸಂಗಮೇಶ‌ತಮ್ಮನಗೌಡ್ರ ಸನ್ಮಾನಿಸಿದರು.

ಅತಿಥಿಗಳಾಗಿ ನಂದಾ ಕಪ್ಪತ್ತನವರ, ರೇಣುಕಾ ಲಕ್ಕುಂಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಲ್ಲಾಸಾಬ ನದಾಫ್, ಶಿವಾನಂದ ಪರಸಣ್ಣವರ,ಗುರುಬಾಯಿ ಹುಲಸೂರ, ಶಂಕ್ರಪ್ಪ ಶಿಳ್ಳಿನ, ವಾಸುದೇವ ಕಲಾಲ,ಸುಜಾತ ಪಾಟೀಲ,ಗೀತಾ ಹಲಸೂರ, ರತ್ನಾ ಬಬಲಿಯವರ, ನಿವೇದಿತಾ ಛಬ್ಬಿ, ವೀರಮ್ಮ ಕಳಸಾಪೂರ, ಶಶಿಕಲಾ ಸಂಕದಾಳ, ನಿರ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here