ಉತ್ತರ ಪ್ರದೇಶದ ಮಹಿಳೆಯೊಬ್ಬರು ಎರಡು ಬಾರಿ ಮದುವೆಯಾಗಿ ಡಿವೋರ್ಸ್ ಪಡೆದು, ಇದೀಗ ಪ್ರೀತಿಸಿ ಮೂರನೇ ಬಾರಿಗೆ ವಿವಾಹವಾಗಿದ್ದಾಳೆ.. ಈ ಬಾರಿ 12ನೇ ತರಗತಿಯ ಶಾಲಾ ವಿದ್ಯಾರ್ಥಿನಿಯ ಕೈಹಿಡಿಯುವ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.ಇದೀಗ ಈ ವಿಚಾರ ವಿವಾದಾತ್ಮಕ ತಿರುವುದು ಪಡೆದುಕೊಂಡಿದೆ.
ಶಬಾನಾ ಎಂಬ 30 ವರ್ಷದ ಮಹಿಳೆ ಉತ್ತರ ಪ್ರದೇಶದ ಅಮ್ರೋ ಜಿಲ್ಲೆಯಲ್ಲಿ ವಾಸವಾಗಿದ್ದಾಳೆ. ಈಗಾಗಲೇ ಈಕೆ ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾಳೆ. ಪ್ರಸ್ತುತ 12ನೇ ತರಗತಿಯ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪ್ರೀತಿಯ ಸಲುವಾಗಿ ಶಬಾನಾ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವಾನಿ ಅಂತ ಹೆಸರನ್ನೂ ಸಹ ಬದಲಾಹಿಸಿಕೊಂಡಿದ್ದಾಳೆ.
30 ವರ್ಷದ ಮಹಿಳೆ 18 ವರ್ಷದ ಹುಡುಗನನ್ನು ಮದುವೆಯಾಗಿರುವ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿದ ಪೊಲೀಸರು, ಸಬಾನಾ ಬಗ್ಗೆ ಕೆಲವು ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಶಿವಾನಿ ಎಂದು ಹೆಸರು ಬದಲಾಯಿಸಿಕೊಂಡಿರುವ ಶಬಾನಾ ಒಬ್ಬ ನಿರ್ಗತಿಕ ಮಹಿಳೆಯಾಗಿದ್ದು, ಈಗಾಗಲೇ ಮದುವೆಯಾಗಿ ಈಕೆಗೆ ಮೂರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಾನಿ ಮೊದಲು ಮೀರತ್‌ನ ವ್ಯಕ್ತಿಯನ್ನು ಮದುವೆಯಾಗಿ ಕೆಲ ವರ್ಷಕ್ಕೆ ಡಿವೊರ್ಸ್ ಪಡೆದರು.. ನಂತರ ಎರಡನೇ ಬಾರಿಗೆ ವಿವಾಹವಾದರು. ಆದರೆ, ಶಿವಾನಿಯ ಎರಡನೇ ಪತಿ ಅಪಘಾತದಲ್ಲಿ ಅಂಗವಿಕಲರಾದರು. ಈ ವೇಳೆ ಅಂದ್ರೆ, 2011 ರಲ್ಲಿ ಈಕೆಗೆ 12ನೇ ತರಗತಿ ವಿದ್ಯಾರ್ಥಿನಿ ಪರಿಚಯವಾಗುತ್ತದೆ. ಇದರಿಂದಾಗಿ ಎರಡನೇ ಪತಿಗೆ ವಿಚ್ಛೇದನ ನೀಡಿ, ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದಾಳೆ.
ಶಿವಾನಿಯ 12ನೇ ತರಗತಿಯ ವಿದ್ಯಾರ್ಥಿನಿಯೊಂದಿಗಿನ ಪ್ರೇಮ ಮತ್ತು ವಿವಾಹದ ಸುದ್ದಿ ವೈರಲ್ ಆಗುತ್ತಿದ್ದಂತೆ, ಅನೇಕ ಜನರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶಾಲಾ ಬಾಲಕನ ಜೊತೆ ಮಹಿಳೆಯ ವಿವಾಹ ಕಾನೂನುಬದ್ಧ ಅಪರಾಧವಾಗಿದ್ದು, ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.