ಮಾರುತಿ ಜನಸೇವಾ ಸಂಘ (ರಿ) ಮಾರುತಿ ಯುವಕ ಮಂಡಲ (ರಿ) ,40 ನೇ ವರ್ಷದ ಮಾರುತಿ ಮಾಣಿಕ್ಯ ಮಹೋತ್ಸವವು ದಿನಾಂಕ 25-12-2025 ರಂದು ಸಂಜೆ 3 ಗಂಟೆಗೆ ಪುರಭವನ, ಮಂಗಳೂರಿನಲ್ಲಿ ನಡೆಯಲಿದೆ. ಮಾರುತಿ ಮಾಣಿಕ್ಯ ಸಾಧಕ ಪ್ರಶಸ್ತಿ ಪ್ರದಾನ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ನೂತನ ಮನೆ ಹಸ್ತಾಂತರ ಗೌರವ ಸಮರ್ಪಣೆ ಕರಾವಳಿ ಆಹಾರ ಮೇಳ , ಸಾಂಸ್ಕೃತಿಕ ವೈಭವ 40ನೇ ವರ್ಷಾಚರಣೆಯ ಸಮಾರೋಪ ಸಂಭ್ರಮವು ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮವು ಸಂಜೆ 3 ಗಂಟೆಗೆ ನಡೆಯಲಿದ್ದು ,ನೃತ್ಯ ವೈವಿದ್ಯ ಝೀ ಟಿ.ವಿ. ಡಿಐಡಿ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತೆ ವಿಧುಷಿ ಹೆಜ್ಜೆನಾದ ತಂಡದವರಿಂದ ಹಾಗೂ ,ಖ್ಯಾತ ಹಿನ್ನೆಲೆ ಗಾಯಕರಾದ ಸುಪ್ರೀತ್ ಸಫಲಿಗ ಹಾಗೂ ಮಲ್ಲಿಕಾ ಮಟ್ಟಿ ಇವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.
ಮಾರುತಿ ಮಾಣಿಕ್ಯ ಸಾಧಕ ಪ್ರಶಸ್ತಿ 2025 ಪುರಸ್ಕೃತರು
* ಕುಮಾರಿ ಧನಲಕ್ಷ್ಮಿ ಪೂಜಾರಿ – ವಿಶ್ವಕಪ್ ವಿಜೇತ ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ಆಟಗಾರ್ತಿ.
*ಶ್ರೀಯುತ ರವಿಶಂಕರ್ ವಳಕುಂಬ – ತೆಂಕುತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ.
*ಕುಮಾರಿ ದೀಪಾಶ್ರೀ ಯಸ್. – ಪಿ.ಯು.ಸಿ. ಪ್ರಥಮ ಬ್ಯಾಂಕ್ ವಿಜೇತೆ, ವಾಣಿಜ್ಯ ವಿಭಾಗ 2024-2025.
*ಕುಮಾರಿ ರೆಮೋನಾ ಇವೆಟ್ ಪಿರೇರಾ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಭರತನಾಟ್ಯ ಕಲಾವಿದೆ.
*ಪ್ರಮೀಳಾ ದೀಪಕ್ ಪೆರ್ಮುದೆ – ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿ.
*ಶ್ರೀಯುತ ಶಮ್ಮಿ ಗಫೂರ್ ಪಡುಬಿದ್ರಿ – ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ನಾಗಸ್ವರ ಹಾಗೂ ಸ್ಯಾಕ್ಸೋಫೋನ್ ಕಲಾವಿದ.

