ಬಲಿಪ ಪ್ರಸಾದ ಭಾಗವತರ 50ರ ನೆನಪು : ಮಾರೂರಿನಲ್ಲಿ ರಾಘವೇಂದ್ರ ಭಂಡಾರ್ಕಾರ್ ಗೆ ಪಂಚಾಶತ್ ಸಮ್ಮಾನ

0
26

ಮೂಡುಬಿದಿರೆ : ಬಲಿಪ ಪ್ರಸಾದ್ ಭಾಗವತರ 50ರ ನೆನಪಿನ ಅಂಗವಾಗಿ ಆಯೋಜಿಸಲಾದ ಪಂಚಾಶತ್ ಸ್ಮರಣೆ–ಪಂಚಾಶತ್ ಸಮ್ಮಾನ್ ಸರಣಿಯ 12ನೇ ಸನ್ಮಾನ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ, ಜ್ಯೋತಿಷಿ, ಲೇಖಕ, ಯಕ್ಷಗಾನ ಸಂಘಟಕ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಮಾರೂರು ಗುಡ್ಡಲಂಗಡಿಯಲ್ಲಿ ಬುಧವಾರ ಗೌರವಿಸಿ ಸಮ್ಮಾನಿಸಲಾಯ್ತು.

ಯಕ್ಷಗಾನ ಸಂಘಟಕ ಶಾಂತರಾಮ ಕುಡ್ವ ಸಂಸ್ಮರಣ ಭಾಷಣ ಮಾಡಿದರು. ಪ್ರಸಾದ್ ಬಲಿಪರು ಬಲಿಪ ಪರಂಪರೆಯ ನಾಲ್ಕನೇ ತಲೆಮಾರಿನ ಕೊಂಡಿಯಾಗಿದ್ದು, ಬಲಿಪ ನಾರಾಯಣ ಭಾಗವತರು ಸೇರಿದಂತೆ ಅವರ ಕುಟುಂಬದ ಕಲಾಸೇವೆ ಯಕ್ಷಗಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದರು. ಯಕ್ಷಗಾನದ ಪೂರ್ವರಂಗದ ನಾಟ್ಯದ ಪದ್ಯಗಳನ್ನು ಸಂಪೂರ್ಣ ಕರಗತ ಮಾಡಿಕೊಂಡ ವಿರಳ ಭಾಗವತರಲ್ಲಿ ಅವರು ಕೂಡ ಆಗಿದ್ದು,ಯಾವುದೇ ಧ್ವನಿವರ್ಧಕವಿಲ್ಲದೆ ಸಾವಿರಾರು ಪ್ರೇಕ್ಷಕರಿಗೂ ತಲುಪುವ ಅವರ ಏರುಕಂಠ ಯಕ್ಷಗಾನ ರಂಗದ ವಿಶಿಷ್ಟ ಸಂಪತ್ತಾಗಿದೆ ಎಂದು ಅಭಿಪ್ರಾಯಪಟ್ಟರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾರೂರು ರಾಘವೇಂದ್ರ ಭಂಡಾರ್ಕಾರ್, ಬಾಲ್ಯದಿಂದಲೇ ಬಲಿಪ ಮಾಧವ ಭಾಗವತ ಹಾಗೂ ಬಲಿಪ ನಾರಾಯಣ ಭಾಗವತರೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡಿದ್ದನ್ನು ನೆನಪಿಸಿಕೊಂಡರು. ಕಟೀಲು ಮೇಳದ ಆಟಗಳ ಮೇಲಿನ ಆಸಕ್ತಿಯಿಂದ 1995-96ರಲ್ಲಿ ರಲ್ಲಿ ಪತ್ರದ ಮೂಲಕ ಬಲಿಪ ನಾರಾಯಣ ಭಾಗವತರನ್ನು ಸಂಪರ್ಕಿಸಿ ಆಟ ಆಯೋಜಿಸಿದ್ದ ಅನುಭವವನ್ನು ರಾಘವೇಂದ್ರ ಭಂಡಾರ್ಕಾರ್ ಅವರು ಹಂಚಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಘಟಕ ಹಾಗೂ ಪತ್ರಕರ್ತ ಕೃಷ್ಣಕುಮಾರ್, ಪ್ರಸಾದ್ ಬಲಿಪರ ಕಲಾಸೇವೆ, ಬಲಿಪ ಪರಂಪರೆಯ ವೈಶಿಷ್ಟ್ಯ ಮತ್ತು ಯಕ್ಷಗಾನ ರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದರು.

ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ. ದಯಾನಂದ ಪೈ,ಮೊಹಮ್ಮದ್ ಅಸ್ಲಮ್, ರೋಟರಿ ಮಿಡ್ ಟೌನ್‌ನ 2025-26ನೇ ಸಾಲಿನ ಅಧ್ಯಕ್ಷ ಕರುಣಾಕರ ದೇವಾಡಿಗ, 2026-27ನೇ ಸಾಲಿನ ಕಾರ್ಯದರ್ಶಿ ಮುರಳೀಧರ ಕೋಟ್ಯಾನ್, ಅಭಿನಂದನ್ ಬಲ್ಲಾಳ್, ರೋಟರಿ ಜಿಲ್ಲೆ 3181ರ ಝೋನ್–1ರ 2025-26ನೇ ಸಾಲಿನ ಸಹಾಯಕ ಗವರ್ನರ್ ರಾಬರ್ಟ್ ಫ್ರಾಂಕ್ಲಿನ್ ರೇಗೋ, 2026-27ನೇ ಸಾಲಿನ ಜಿಲ್ಲಾ ಗವರ್ನರ್ ಜೋಯಲ್ ಡಿಸೋಜ, ಜಿಲ್ಲಾ ವಲಯ ಸೇನಾನಿ ವಿದೇಶ್ ಎಂ., ಪ್ರಮುಖರಾದ ಗಣೇಶ್ ನಾಯಕ್ ಬಾರ್ದಿಲ, ಶಿವಪ್ರಸಾದ್ ಹೆಗ್ಡೆ, ಕರುಣಾಕರ ದೇವಾಡಿಗ, ಸುಶಾಂತ ಕರ್ಕೇರ, ಶಂಕರ ಆಚಾರ್ಯ, ಸರಸ್ವತಿ ಸದಾಶಿವ ಆಚಾರ್ಯ, ಸದಾಶಿವ ಆಚಾರ್ಯ, ಸಂಜೀವ ಆಚಾರ್ಯ, ಸಂಜೀವ ಆಚಾರ್ಯ, ಕುಮಾರ್ ಪೂಜಾರಿ, ಸುಶಾಂತ ಕರ್ಕೇರ, ಪ್ರಶಾಂತ್ ಕೆ. ಭಂಡಾರಿ ಉಪಸ್ಥಿತರಿದ್ದರು. ಪತ್ರದ ಮೂಲಕ ಬಲಿಪ ನಾರಾಯಣ ಭಾಗವತರನ್ನು ಸಂಪರ್ಕಿಸಿ ಆಟ ಆಯೋಜಿಸಿದ್ದ ಅನುಭವವನ್ನು ಹಂಚಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಘಟಕ ಹಾಗೂ ಪತ್ರಕರ್ತ ಕೃಷ್ಣಕುಮಾರ್, ಪ್ರಸಾದ್ ಬಲಿಪರ ಕಲಾಸೇವೆ, ಬಲಿಪ ಪರಂಪರೆಯ ವೈಶಿಷ್ಟ್ಯ ಮತ್ತು ಯಕ್ಷಗಾನ ರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದರು.

ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ. ದಯಾನಂದ ಪೈ,ಮೊಹಮ್ಮದ್ ಅಸ್ಲಮ್, ರೋಟರಿ ಮಿಡ್ ಟೌನ್‌ನ 2025-26ನೇ ಸಾಲಿನ ಅಧ್ಯಕ್ಷ ಕರುಣಾಕರ ದೇವಾಡಿಗ, 2026-27ನೇ ಸಾಲಿನ ಕಾರ್ಯದರ್ಶಿ ಮುರಳೀಧರ ಕೋಟ್ಯಾನ್, ಅಭಿನಂದನ್ ಬಲ್ಲಾಳ್, ರೋಟರಿ ಜಿಲ್ಲೆ 3181ರ ಝೋನ್–1ರ 2025-26ನೇ ಸಾಲಿನ ಸಹಾಯಕ ಗವರ್ನರ್ ರಾಬರ್ಟ್ ಫ್ರಾಂಕ್ಲಿನ್ ರೇಗೋ, 2026-27ನೇ ಸಾಲಿನ ಜಿಲ್ಲಾ ಗವರ್ನರ್ ಜೋಯಲ್ ಡಿಸೋಜ, ಜಿಲ್ಲಾ ವಲಯ ಸೇನಾನಿ ವಿದೇಶ್ ಎಂ., ಪ್ರಮುಖರಾದ ಗಣೇಶ್ ನಾಯಕ್ ಬಾರ್ದಿಲ, ಶಿವಪ್ರಸಾದ್ ಹೆಗ್ಡೆ, ಕರುಣಾಕರ ದೇವಾಡಿಗ, ಸುಶಾಂತ ಕರ್ಕೇರ, ಶಂಕರ ಆಚಾರ್ಯ, ಸರಸ್ವತಿ ಸದಾಶಿವ ಆಚಾರ್ಯ, ಸದಾಶಿವ ಆಚಾರ್ಯ, ಸಂಜೀವ ಆಚಾರ್ಯ, ಸಂಜೀವ ಆಚಾರ್ಯ, ಕುಮಾರ್ ಪೂಜಾರಿ, ಸುಶಾಂತ ಕರ್ಕೇರ, ಪ್ರಶಾಂತ್ ಕೆ. ಭಂಡಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here