ಉಜಿರೆಯಲ್ಲಿ 5ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ : ಶಾಸಕರಿಂದ ಉದ್ಘಾಟನೆ

0
11

ಉಜಿರೆ : ವಿಷುಕಣಿ ಆಚರಣಾ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕು ಶಾಸಕರಾದ Harish Poonja ಅವರ ನೇತೃತ್ವದಲ್ಲಿ ಆಯೋಜಿಸಲಾದ 5ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ Dr. Krishna Prasad ಅವರು ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಜನಪರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

“ಎಲ್ಲಾ ಸಮುದಾಯದವರೂ ನಮ್ಮವರು ಎಂಬ ಭಾವನೆ ಇನ್ನಷ್ಟು ಬಲವಾಗಬೇಕು. ಶಾಸಕರ ಶಿಫಾರಸಿನ ಮೂಲಕ ನಮ್ಮ ನೇತ್ರಾಲಯಕ್ಕೆ ಬರುವ ಅಂಧರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನೀಡಲಾಗುವುದು. ಶಾಸಕರ ಸಹಯೋಗದೊಂದಿಗೆ ಬೆಳ್ತಂಗಡಿಯನ್ನು ಅಂಧಮುಕ್ತ ತಾಲೂಕನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ” ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಉಮೇಶ್ ಟಿ., ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಮನ್ ಕಿ ಭಾತ್ ಪ್ರಮುಖ ಸೀತಾರಾಮ ಬೆಳಾಲು, ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಹರೀಶದ್ ಕಳೆಂಜ, ಯಶವಂತ್ ಪುದುವೆಟ್ಟು, ಉಜಿರೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಉಷಾ ಕಾರಂತ್ ಹಾಗೂ ಪುಷ್ಪ ಆರ್. ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಷುಕಣಿ ಆಚರಣಾ ಸಮಿತಿಯ ಅನಿಲ್ ಶಿಬಾಜೆ, ಬಾಲಕೃಷ್ಣ ನೈಮಿಷ, ಪ್ರಸಾದ್ ಬಿ.ಎಸ್., ದಿವಿನೇಶ್ ಹಾಗೂ ಸಮಿತಿಯ ಸದಸ್ಯರು, ಮುಖಂಡರಾದ ಸದಾನಂದ ಉಂಗಿಲಬೈಲು, ಸುಪ್ರಿತ್ ಜೈನ್, ಶಶಿಕಲಾ ಅರಳಿ, ಪ್ರಸಾದ್ ಕೆ.ವಿ. ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here